ಬೆಂಬಲ ಕಾಂಗ್ರೆಸ್ಸಿಗಾ?ಹಾಗಿದ್ದಲ್ಲಿ ದಯವಿಟ್ಟು ‘ಕೈ’ಗೆ ಮತ ಹಾಕಬೇಡಿ
ಬೆಂಬಲ ಕಾಂಗ್ರೆಸ್ಸಿಗಾ?ಹಾಗಿದ್ದಲ್ಲಿ ದಯವಿಟ್ಟು ‘ಕೈ’ಗೆ ಮತ ಹಾಕಬೇಡಿ
ಅದಲು ಬದಲಾದ ಅಧಿಕೃತ ಆಭ್ಯರ್ಥಿಯ ಚಿಹ್ನೆಯಿಂದಾಗಿ ಸಂಕಟ-ವಿನೋದ
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ‘ಚಿಲಕಲುರಿಪೆಟ್’ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಭ್ಯರ್ಥಿ ‘ಹಸ್ತ ಚಿಹ್ನೆ’ಯ ವಿರುದ್ಧ ಪ್ರಚಾರ ಮಾಡಿದ ಘಟನೆ ವರದಿಯಾಗಿದೆ.
ವಿಷಯ ಏನೂಂದ್ರೆ....
‘ರೈಲು ಎಂಜಿನ್’ ಚಿಹ್ನೆಗೆ ಮತ ಹಾಕಿ, ‘ಕೈ’ಗೆ ಮತ ಹಾಕಬೇಡಿ ಎನ್ನುವ ಕಾಂಗ್ರೆಸ್‌ನ ಆಭ್ಯರ್ಥಿ ಹೆಸರು ವೈ.ಎಸ್. ರಾಜಶೇಖರ್ ರೆಡ್ಡಿ. ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಆರಂಭದಲ್ಲಿ ಮಲ್ಲಾಡಿ ಶಿವನಾರಾಯಣ ಎಂಬವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಆದರೆ ರಾಜಶೇಖರ್ ಬಣದ ತೀವ್ರ ಒತ್ತಡದ ಮೇಲೆ ಮಲ್ಲಾಡಿಯನ್ನು ಬದಲಾಯಿಸಿ ರೆಡ್ಡಿಯನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಯಿತು. ಮಲ್ಲಾಡಿ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿದರು.
ಆದರೆ ‘ಸಮಯ’ ಕೇಳಬೇಕಲ್ಲ. ಅವರು ನಾಮಪತ್ರ ಹಿಂತೆಗೆಯಲು ಹೋದಾಗ ಅವಧಿ ಮೀರಿದೆ ಎಂದು ಚುನಾವಣಾ ಅಧಿಕಾರಿಗಳು ನಿರಾಕರಿಸಿದರು. ಹೀಗೆ ಕಾನೂನು ರೀತಿ ಅವರಿಗೆ ‘ಕೈ’ ಚಿಹ್ನೆ ದೊರೆತರೆ, ರೆಡ್ಡಿಗೆ ‘ಕೈ’ಕೊಟ್ಟಿತು. ಉಳಿದ ‘ರೈಲು ಎಂಜಿನ್’ ಅವರಿಗೆ ಚಿಹ್ನೆಯಾಗಿ ದೊರೆಯಿತು.
ಇದೀಗ, ಮಲ್ಲಾಡಿ ಹಾಗೂ ರಾಜಶೇಖರ್ ಇಬ್ಬರೂ ‘ಹಸ್ತ’ಕ್ಕೆ ಮತ ನೀಡದಂತೆ ಮತದಾರರನ್ನು ಬೇಡುತ್ತಿದ್ದಾರಂತೆ. ಚುನಾವಣೆ ವಿನೋದ ಎಂದರೆ ಇದೇನಾ ?
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications