ಗಂಗೆ ಗರ್ಭದಲ್ಲಿ ಪತ್ತೆಯಾದ ‘ಸಿಪಾಯಿದಂಗೆ’ ಕಾಲದ ನಾಡದೋಣಿ
ಗಂಗೆ ಗರ್ಭದಲ್ಲಿ ಪತ್ತೆಯಾದ ‘ಸಿಪಾಯಿದಂಗೆ’ ಕಾಲದ ನಾಡದೋಣಿ
ರೈಲು ಮಾರ್ಗ ಕಾಮಗಾರಿಯಲ್ಲಿ ದೊರೆತ ಐತಿಹಾಸಿಕ ವಸ್ತುಗಳು
ಅದು ಕೋಲ್ಕತ್ತಾ ನಗರದ ಸಂಚಾರ ವ್ಯವಸ್ಥೆಯ ಆಧುನೀಕರಣದ ಕಾಮಗಾರಿ. ಅದಕ್ಕಾಗಿ ಮೆಟ್ರೋ ರೈಲು ಮಾರ್ಗ ನಿರ್ಮಾಣ ಮಾಡುತ್ತಿದ್ದರು. ಈ ಮಾರ್ಗ ಆದಿ ಗಂಗಾ ನದಿ ಪ್ರದೇಶದಿಂದ ಹಾದುಹೋಗಬೇಕು. ಅದರ ನಿರ್ಮಾಣ ಹಂತದ ಕಾರ್ಯ ನಗರದ ದಕ್ಷಿಣ ಭಾಗದ ಗಾರಿಯಾ ಪ್ರದೇಶದ ಆದಿಗಂಗಾ ನದಿತಳದಲ್ಲಿ ನಡೆಯುತ್ತಿತ್ತು. ಏಪ್ರಿಲ್ 21ರ ಬುಧವಾರ ಉತ್ಖನನ ಮಾಡುತ್ತಿದಾಗ ಮಣ್ಣಿನ ಅಡಿಯಲ್ಲಿ ಈ ಐತಿಹಾಸಿಕ ನಾಡದೋಣಿ ದೊರೆತಿದೆ.
ಸುಮಾರು 30 ಅಡಿ ಉದ್ದವಿರುವ ಈ ದೋಣಿ ಇನ್ನೂ ಗಟ್ಟಿಮುಟ್ಟಾಗಿದೆ. ಬಂಗಾಳದ ಪುರಾತತ್ವ ಇಲಾಖೆ ದೋಣಿಯನ್ನು ತೆಗೆದು ಬೆಹ್ಲಾ ವಸ್ತು ಸಂಗ್ರಹಾಲಯದಲ್ಲಿ ಇರಿಸಿದೆ.
ದೋಣಿ ಮಾತ್ರವಲ್ಲದೆ, ದನದ ಮೂಳೆ ಹಾಗೂ ಇತರ ವಸ್ತುಗಳು ಉತ್ಖನನದಲ್ಲಿ ದೊರೆತಿವೆ. ಆದರೆ 5.5 ಮೀಟರ್ ಆಳದ ಭೂಮಿಯಡಿಯಲ್ಲಿ ಇದ್ದರೂ, ಇವೆಲ್ಲ ಇನ್ನೂ ಚೆನ್ನಾಗಿಯೇ ಇರುವುದು ಆಶ್ಚರ್ಯಕರ ಎನ್ನಿಸುತ್ತದೆ.
ಆದಿ ಗಂಗಾನದಿ ನಾಲೆಯನ್ನು ಹಿಂದೆ ವ್ಯಾಪಾರ ಮಾರ್ಗವಾಗಿ ಬಳಸುತ್ತಿದ್ದರು. ಆಗ ಈ ಪ್ರದೇಶದಲ್ಲಿ ಜಲ ಸಂಚಾರವಿತ್ತು. ದೋಣಿ ಜೊತೆ ದೊರೆತ ಪಳೆಯುಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ಪರಿಶೀಲನೆ ನಡೆಸಿದ ಇತಿಹಾಸ ತಜ್ಞರೊಬ್ಬರು ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications