ಕೃಷ್ಣ ಮದ್ದೂರಿಂದ ಓಡಿಹೋದ ಉತ್ತರ ಕುಮಾರ -ನರೇಂದ್ರ ಮೋದಿ
ಕೃಷ್ಣ ಮದ್ದೂರಿಂದ ಓಡಿಹೋದ ಉತ್ತರ ಕುಮಾರ -ನರೇಂದ್ರ ಮೋದಿ
ಕರ್ನಾಟಕವನ್ನು ಗುಜರಾತ್ ಮಾಡಲು ಎಂಟೆದೆ ಬೇಕು...
ಏಪ್ರಿಲ್ 21ರ ಬುಧವಾರ ರಾಜ್ಯ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ನರೇಂದ್ರ ಮೋದಿ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಸವಾಲೆಸೆದರು. ಕೃಷ್ಣ ಮದ್ದೂರಿನಿಂದಲೇ ಓಡಿ ಹೋಗಿದ್ದಾರೆ. ನಾನು ಯಾವುದಾದರು ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಹೋದರೆ ಆ ಪಕ್ಷದ ನಾಯಕರಿಗೆ ಬಹಳ ಕಿರಿಕಿರಿ ಉಂಟಾಗುತ್ತದೆ ಎಂದರು.
ಭೂಕಂಪದಿಂದ ಛಿಧ್ರವಾಗಿದ್ದ ಗುಜರಾತನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದೇವೆ. ನರ್ಮದಾ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಎಲ್ಲರಿಗೂ ಆ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಆದರೆ ಈ ಸರಕಾರ ಕಾವೇರಿ ನೀರಿನ ಸಮಸ್ಯೆ ಬಗೆ ಹರಿಧಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಟೀಕಿಸಿದರು.
ಐಟಿಯನ್ನು ಕಲ್ಪಿಸುವಲ್ಲಿ ದೇಶದಲ್ಲೇ ಗುಜರಾತ್ ಮೊದಲನೆ ಸ್ಥಾನದಲ್ಲಿದೆ. ವಿಶ್ವದಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಕೃಷ್ಣರಿಗೆ ‘ನಿಮ್ಮ ಜೊತೆ ಕಾಂಗ್ರೆಸ್ ಹೋಯಿತು’ ಎಂದು ಎಸ್‌ಎಮ್‌ಎಸ್ ಕಳುಹಿಸಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸಿಗರು ಮೊದಲಿಗೆ ಸೋನಿಯ ಮೂಲ ಕಂಡುಹಿಡಿಯಲಿ. ಅವರ ಹಿನ್ನಲೆ ಎಂತಹುದು ಎಂದು ತಿಳಿದುಕೊಳ್ಳಲಿ. ಅವರು ಈ ದೇಶದ ಪ್ರಧಾನಿಯಾಗ ಹೊರಟವರು. ಅವರು ‘ವಂದೇ ಮಾತರಂ’ ಹಾಡಲು ಸಿದ್ಧರೇ ಎಂದು ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ಗುಜರಾತ್ ಬೇಡ...
ಇದೇ ಸಂದರ್ಭದಲ್ಲಿ ಇತ್ತ ಬೆಂಗಳೂರಿನಲ್ಲಿ ‘ಕರ್ನಾಟಕವನ್ನು ಗುಜರಾತ್ ಮಾಡುವುದು ಬೇಡ’, ‘ಗುಜರಾತ್ ರಕ್ತದೋಕುಳಿ ಕರ್ನಾಟಕಕ್ಕೆ ಬೇಡ’ ಮೊದಲಾದ ಘೋಷಣೆಗಳನ್ನು ಕೂಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯಕ್ಕೆ ಮೋದಿ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು.
ಎರಡು ಸಾವಿರಕ್ಕಿಂತಲೂ ಹೆಚ್ಚಿನ ಹತ್ಯೆ, ಅತ್ಯಾಚಾರ, ಹಿಂಸಾಚಾರವನ್ನ ಸಮರ್ಥಿಸಿಕೊಂಡ ಮೋದಿ ಕರ್ನಾಟಕದ ಇತರ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳದಂತೆ ನಿಷೇಧಿಸಬೇಕೆಂದು ಜಿಲ್ಲಾಡಳಿತಗಳಿಗೆ ವೇದಿಕೆ ಮನವಿ ಮಾಡಿಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications