ಸಾವು ಎಡವಿದ ಕಾಲ್ಚೆಂಡಾಟದ ವಿದ್ಯಾರ್ಥಿ, ಮರ ಯುವಕನ ನುಂಗಿತು
ಸಾವು ಎಡವಿದ ಕಾಲ್ಚೆಂಡಾಟದ ವಿದ್ಯಾರ್ಥಿ, ಮರ ಯುವಕನ ನುಂಗಿತು
ಬರ ಸಿಡಿಲಿಗೆ ಮೈಸೂರಿನಲ್ಲಿ ಇಬ್ಬರು ಬಲಿ
ಏಪ್ರಿಲ್ 21ರ ಬುಧವಾರ ಸಂಜೆ ಮಳೆ ಸುರಿಯುತ್ತಿದ್ದಾಗ, ಗೆಳೆಯರೊಂದಿಗೆ ಫುಟ್‌ಬಾಲ್ ಆಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೃಷ್ಣ (19) ಮಾರಣಂತಿಕ ಸಿಡಿಲ ಹೊಡತಕ್ಕೆ ಬಲಿಯಾಗಿದ್ದಾನೆ. ಆತನ ಜೊತೆ ಆಟವಾಡುತ್ತಿದ್ದ ಭಗತ್, ರವಿಶಂಕರ್, ಸುಬ್ಬುಕೃಷ್ಣ ರಿಗೂ ಸಿಡಿಲು ಹೊಡೆದಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆಯಿಂದ ಆಶ್ರಯ ಪಡೆಯಲು ಮರದ ಅಡಿಯಲ್ಲಿ ನಿಂತಿದ್ದ ಸುಮಾರು 22 ವರ್ಷದ ಅನಾಮಿಕ ಯುವಕ ಸಿಡಿಲಿನಿಂದ ಸಾವನ್ನಪ್ಪಿದ್ದಾನೆ. ಆತನ ಗುರುತು-ಪರಿಚಯ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications