ಕೃಷ್ಣಪ್ಪನ ಹೆಂಡತಿ ಮುಮ್ತಾಜ್‌, ಇಸ್ಮಾಯಿಲ್‌ ಪುತ್ರ ಮಲ್ಲಿಕಾರ್ಜುನ..!

ಕೃಷ್ಣಪ್ಪನ ಹೆಂಡತಿ ಮುಮ್ತಾಜ್‌, ಇಸ್ಮಾಯಿಲ್‌ ಪುತ್ರ ಮಲ್ಲಿಕಾರ್ಜುನ..!
ಮತದಾನ ಮಾಡಲು ಹೋಗಿ ಇಂಗುತಿಂದ ಮಂಗನಂತಾದವರ ಕಥೆ.

ಬೆಂಗಳೂರು : ‘ಮತದಾನ ನಿಮ್ಮ ಆದ್ಯ ಕರ್ತವ್ಯ. ತಪ್ಪದೆ ಮತದಾನ ಮಾಡಿ.’

ಇಂತಹ ಹಲವು ಘೋಷಣೆಗಳನ್ನು ಎಡೆಬಿಡದೆ ನೋಡಿ ಕೇಳಿ ಮತದಾನ ಮಾಡಲು ಹೋದ ಕೆಲವರ ಪರಿಸ್ಥಿತಿ ಯಾರಿಗೂ ಬೇಡ. ್ಫ ಸಾವಿರಾರು ಜನರಿಗೆ ಮತದಾನ ಮಾಡಲು ಸಾಧ್ಯವಾಗಲೇ ಇಲ್ಲ . ಕಾರಣ ಮತಪಟ್ಟಿಯಲ್ಲಿ ಹೆಸರಿರಲಿಲ್ಲ . ಚುನಾವಣಾ ಆಯೋಗವೇ ದಯಪಾಲಿಸಿದ್ದ ಗುರುತಿನ ಚೀಟಿಗೆ ಕವಡೆ ಕಿಮ್ಮತ್ತೂ ಇರಲಿಲ್ಲ .

ಹಲವೆಡೆ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನಕ್ಕೆ ಅವಕಾಶ ದೊರೆಯಲಿಲ್ಲ. ನಗರದ ಚಾಮರಾಜಪೇಟೆಯಲ್ಲಿ ಮತದಾನ ವಂಚಿತರು ಚುನಾವಣಾ ಅಧಿಕಾರಿಗಳಿಗೆ ಘೕರಾವ್‌ ಹಾಕಿದ ಘಟನೆ ನಡೆಯಿತು. ದಕ್ಷಿಣ ಬೆಂಗಳೂರು ಲೋಕಸಭಾ ಅಭ್ಯರ್ಥಿ ಜಯಂತಿ ಕೆಲವು ನೊಂದ ಮತದಾರರನ್ನು ಸಂತೈಸಿ, ಈ ಕುರಿತು ಆಯೋಗದ ಗಮನ ಸೆಳೆಯುವುದಾಗಿ ಹೇಳಿದರು.

ಬಿನ್ನಿಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿತ್ತು. ಇಲ್ಲಿಯ ಹಲವು ಅಲ್ಪ ಸಂಖ್ಯಾಕರ ಹೆಸರನ್ನು ವಿ. ಸೋರ್ಮಣ್ಣ ಅವರು ಮತಪಟ್ಟಿಯಿಂದ ತೆಗೆಸಿಧಿಹಾಕಿದ್ದಾರೆ ಎಂದು ಜೆಡಿಎಸ್‌ ಆಭ್ಯರ್ಥಿ ಅಬ್ದುಲ್‌ ಅಜೀಂ ಆರೋಪಿಸಿದ್ದಾರೆ.

ಉಳಿದಂತೆ ಕೋಲಾರದ ಮಾಲೂರಿನಲ್ಲಿ , ವರ್ತೂರಿನ ದೊಡ್ಡ ನಕುಂದಿಯಲ್ಲಿ ಮತದಾರರಿಗೆ ನಿರಾಶೆ ಕಾದಿತ್ತು. ಬೆಂಗಳೂರಿನ ಇಂದಿರಾ ನಗರ, ವಿಜಯನಗರ, ತ್ಯಾಗರಾಜನಗರ, ಬಸವನಗುಡಿ ಮುಂತಾದೆಡೆ ನಿರಾಶೆ ಮತ್ತು ಆಕ್ರೋಶದಿಂದ ಹಲವು ಮತದಾರರು ಮನೆಗೆ ತೆರಳಿದರು.

ನಾಪತ್ತೆ ಯಾದುದು ಹೆಸರಷ್ಟೇ ಅಲ್ಲ !

ಪಟ್ಟಿಯಿಂದ ಹೆಸರು ಮಾತ್ರ ನಾಪತ್ತೆಯಾಗಲಿಲ್ಲ. ಕೆಲವರದು ಹೆಸರು ಬದಲಾಯಿಸಲ್ಪಟ್ಟರೆ, ಕೆಲವರ ತಂದೆ ಬದಲಾಗಿದ್ದಾರೆ. ಇನ್ನು ಕೆಲವರು ಜಾತಿ ಬದಲಾಯಿಸಿದ್ದಾರೆ. ತಂದೆ ಮತ್ತು ಮಗನ ಜಾತಿ ಬೇರೆ-ಬೇರೆಯಾಗಿ ದಾಖಲಾಗಿದೆ. ಕೃಷ್ಣಪ್ಪನಿಗೆ ಮುಮ್ತಾಜ್‌ ಪತ್ನಿಯಾದರೆ,ಇಸ್ಮಾಯಿಲ್‌ಗೆ ಮಲ್ಲಿಕಾರ್ಜುನ ಮಗನಾದದ್ದೂ ಇದೆ. ಕನಿಷ್ಠ ಮತಪಟ್ಟಿಯಧಿಲ್ಲಾದರೂ ಕೋಮು ಸೌಹಾರ್ದತೆ ಸಾಧ್ಯವಾಯಿತೆಂದು ಖುಷಿ ಪಡೋಣವಾ ?

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+