ಪ್ರಕಾಶಮಾನ ಭಾರತದ ಚುನಾವಣಾ ಮೊದಲಂಕಕ್ಕೆ ತೆರೆ ;19 ಸಾವು
ಪ್ರಕಾಶಮಾನ ಭಾರತದ ಚುನಾವಣಾ ಮೊದಲಂಕಕ್ಕೆ ತೆರೆ ;19 ಸಾವು
ಮೊದಲ ಹಂತದ ಮತದಾನ : ದಾಳಿಯಿಂದ ಸಿನ್ಹಾ, ಅಬ್ದುಲ್ಲ ಪಾರು
ಏಪ್ರಿಲ್ 20ರ ಮಂಗಳವಾರ ನಡೆದ ಮತದಾನದ ಹಿಂಸಾಚಾರದಲ್ಲಿ 6 ಮಂದಿ ಆರಕ್ಷಕರು, ಒಬ್ಬ ಹವ್ಯಾಸಿ ಪತ್ರಕರ್ತ ಸೇರಿದಂತೆ 19 ಮಂದಿ ಹತರಾಗಿದ್ದಾರೆ. ಗಾಳಿಯಲ್ಲಿ ಗುಂಡು, ಲಾಠಿ ಚಾರ್ಜ್, ಗುಂಪು ಘರ್ಷಣೆಯಂತಹ ಘಟನೆಗಳು ಅಲ್ಲಲ್ಲಿ ನಡೆದಿವೆ. ಇದನ್ನು ಹೊರತು ಪಡಿಸಿದರೆ ದೇಶದೆಲ್ಲೆಡೆ ಮತದಾನ ಬಹುತೇಕ ಶಾಂತಿಯುತವಾಗಿದೆ.
ಲೋಕಸಭೆಯ ಜೊತೆ ಕರ್ನಾಟಕ, ಒರಿಸ್ಸಾ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ವಿಧಾನ ಸಭೆಗೂ ಮೊದಲ ಹಂತದ ಚುನಾವಣೆ ನಡೆದಿದೆ.
ಉಗ್ರಗಾಮಿಗಳು ಚುನಾವಣೆ ಬಹಿಷ್ಕರಿಸಿದ್ದ ಜಮ್ಮು ಕಾಶ್ಮೀರ, ಮಿಜೋರಾಂ, ಜಾರ್ಖಂಡ್, ಛತ್ತೀಸ್‌ಘಡ ಮತ್ತು ಮಣಿಪುರ ದಿಂದ ಅಹಿತಕರ ಘಟನೆಗಳು ವರದಿಯಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌ನಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ರಾಂಚಿಯಲ್ಲಿ ಕೇಂದ್ರ ಸಚಿವ ಯಶವಂತಸಿನ್ಹಾ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದರೂ ಅವರು ಅಪಾಯದಿಂದ ಪಾರಾಗಿದ್ದಾರೆ. ಇಂತಹ ದಾಳಿ ಅವರ ಮೇಲೆ ನಡೆಯುತ್ತಿರುವುದು ಇದು ಎರಡನೇ ಬಾರಿ.
ಜಮ್ಮು ವಿನ ಬದ್ಗಾಮ್ ಜಿಲ್ಲೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲ ಉಗ್ರಗಾಮಿಗಳ ಬಾಂಬ್ ದಾಳಿಯಿಂದ ಪಾರಾಗಿದ್ದಾರೆ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications