ಪ್ರಧಾನಿ ಅಟಲ್‌ಗೆ ‘ಅಡ್ವಾಣಿ’ ಸಮರ್ಥ ಉತ್ತರಾಧಿಕಾರಿ: ಬಂಗಾರಪ್ಪ
ಪ್ರಧಾನಿ ಅಟಲ್‌ಗೆ ‘ಅಡ್ವಾಣಿ’ ಸಮರ್ಥ ಉತ್ತರಾಧಿಕಾರಿ: ಬಂಗಾರಪ್ಪ
ಗಾಂಧಿ ಎಂದು ಹೆಸರಿದ್ದವರೆಲ್ಲ ನಿಜವಾದ ಗಾಂಧಿಗಳಲ್ಲ...
ದೇಶಪ್ರೇಮಿ ಅಡ್ವಾಣಿ, ವಾಜಪೇಯಿ ಬಳಿಕ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ ಎಂದು ಬಂಗಾರಪ್ಪ ಹೇಳಿದರು. ಅವರು ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಜಾ ದಿನವೆಲ್ಲ ಆದಿತ್ಯವಾರವಲ್ಲ, ಹಾಗೆಯೇ ಗಾಂಧಿ ಎಂದು ಹೆಸರಿದ್ದವರೆಲ್ಲ ನಿಜವಾದ ಗಾಂಧಿಗಳಲ್ಲ . ಕಾಂಗ್ರೆಸಿಗರು ಗಾಂಧಿ ಎಂದು ಕೇಳಿದೊಡನೆ ರೋಮಾಂಚನಗೊಳ್ಳಬೇಕಾಗಿಲ್ಲ ಎಂದು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್ ನಾಯಕಿಯಾಗಿ ಮತ್ತು ವಿರೋಧಪಕ್ಷದ ನಾಯಕಿಯಾಗಿ ದೇಶ ಸೋನಿಯಾ ಅವರನ್ನು ಗೌರವಿಸುತ್ತದೆ. ಆದರೆ ವಿದೇಶಿ ಮೂಲದವರು ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುವುದು ದೇಶಕ್ಕೆ ಅಪಾಯ ಮತ್ತು ಅಸಾಧ್ಯ. ಸೋನಿಯಾ ರಾಜಕೀಯ ಅವಧಿ ರಾಜೀವ್‌ಗಾಂಧಿ ಮತ್ತು ಇಂದಿರಾ ಗಾಂಧಿ ಕಾಲದಂತಿಲ್ಲ . ಅವರಿಗಿನ್ನೂ ರಾಜಕೀಯದಲ್ಲಿ ಪ್ರೌಢಿಮೆ ಬಂದಿಲ್ಲ. ಸದನದ ಒಳಗೂ ಹೊರಗೂ ಯಾರೋ ಬರೆದ ಭಾಷಣ ಓದಬಲ್ಲರಷ್ಟೆ ಎಂದು ಟೀಕಿಸಿದರು.
ಅವರನ್ನ ನೀವೇ ಪರಿಗಣಿಸದಿದ್ದ ಮೇಲೆ ನಾನು ಏನ್ನನ್ನು ಹೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಕುರಿತು ಬಂಗಾರಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications