ಚುನಾವಣಾ ಚಿತ್ರಗಳು : ಚಿತ್ರದುರ್ಗದಿಂದ ರಾಯಚೂರಿನವರೆಗೆ....
ಚುನಾವಣಾ ಚಿತ್ರಗಳು : ಚಿತ್ರದುರ್ಗದಿಂದ ರಾಯಚೂರಿನವರೆಗೆ....
ಲಿಂಗಸೂಗೂರಿನಲ್ಲಿ ಇರಿತ, ಮಾನ್ವಿಯಲ್ಲಿ 26 ಜನರ ಬಂಧನ
ರಾಯಚೂರು ಜಿಲ್ಲೆಯ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಚೂರಿಯಿಂದ ಇರಿಯಲಾಗಿದೆ. ಮಾರಕಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಾನ್ವಿಯಲ್ಲಿ 26 ಜನರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಜ್ಯದ ದಾವಣಗೆರೆ, ತುಮಕೂರು, ಕನಕಪುರ, ಬೀದರ್, ಗುಲ್ಬರ್ಗ ಮುಂತಾದ ಕಡೆಗಳಲ್ಲಿ ಮತದಾನವು ಶಾಂತಿಯುತವಾಗಿ ನಡೆದಿದೆ.
ಸಚಿವ ಡಿ.ಕೆ.ಶಿವಕುಮಾರ್ ಸ್ಪರ್ಧಿಸಿರುವ ಪ್ರತಿಷ್ಠಿತ ಸಾತನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ 8-10 ಬಸ್ಸುಗಳನ್ನು ಜಾತ್ಯತೀತ ದಳದ ಕಾರ್ಯಕರ್ತರು ತಡೆದು ನಿಲ್ಲಿಸಿದರು. ಇದರಿಂದಾಗಿ, ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಬಿಸಿಲ ಬೇಗೆ-ಕೆಲವೆಡೆ ನೀರಸ : ಹೈದರಾಬಾದ್ ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಸಿಲ ತೀವ್ರತೆಯಿಂದ ಜನರು ಮತ ಚಲಾವಣೆ ಅಡ್ಡಿ ಉಂಟಾಯಿತು. ಬಳ್ಳಾರಿಯಲ್ಲಿ ಸಹ ಮತದಾನ ನೀರಸವಾಗಿತ್ತು .
ಶ್ರೀನಿವಾಸಪುರದಲ್ಲಿ ಕಲಹ : ನಾಯಕರುಗಳ ಪಕ್ಷಾಂತರದಿಂದ ತೀವ್ರ ಕುತೂಹಲ ಕೆರಳಿಸಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಮತದಾನಕ್ಕೆ ಅಡಚಣೆ ಉಂಟಾಯಿತು.
ಮತಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಬಳ್ಳಾರಿಯ ಮತಗಟ್ಟೆ ಸಂಖ್ಯೆ 139 ರಲ್ಲಿ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತವಾಗಿತ್ತು . ಚಿತ್ರದುರ್ಗದಲ್ಲಿ ಗುರುತಿನ ಚೀಟಿ ಇದ್ದರೂ ಮತದಾರ ಪಟ್ಟಿಯಲ್ಲಿ ಹೆಸರಿರದವರು ಮತದಾನ ಮಾಡಲಾಗದೆ ನಿರಾಶರಾದರು. ಗುಂಪುಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಬೆತ್ತ ಬೀಸಿದರು.
ಕಾಂಗ್ರೆಸ್ಸಿಗೇ ಓಟು ಹಾಕಿ : ದೊಡ್ಡಬಳ್ಳಾಪುರ ಬಳಿಯ ಗೌಡಗೆರೆ ಮತಗಟ್ಟೆ ಮತ್ತು ಕೊಪ್ಪಳಗಳಲ್ಲಿ ಮತದಾರರನ್ನು ಕಾಂಗ್ರೆಸ್ಸಿಗೇ ಓಟು ಹಾಕಿರೆಂದು ಪಕ್ಷದ ಕಾರ್ಯಕರ್ತರು ಬಲವಂತ ಮಾಡಿದರು ಎಂದು ಪ್ರತಿಪಕ್ಷಗಳ ನಾಯಕರು ಪಾದಿಸಿದ್ದಾರೆ.
ಕೊಪ್ಪಳದ ಮತಗಟ್ಟೆಯಾಂದರಲ್ಲಿ ಚುನಾವಣಾಧಿಕಾರಿಯೇ ಕಾಂಗ್ರೆಸ್ ಪರ ಮತ ಯಾಚಿಸತೊಡಗಿದಾಗ ಬಿಜೆಪಿ ಹಾಗೂ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿವಾದಿತ ಅಧಿಕಾರಿಯನ್ನು ಚುನಾವಣಾ ಕಾರ್ಯದಿಂದ ವಾಪಸ್ಸು ಪಡೆದ ನಂತರ ಚುನಾವಣೆ ಮುಂದುವರೆಯಿತು.
ಚನ್ನಗಿರಿ : ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲ್ ಸ್ಪರ್ಧಿಸಿರುವ ಚನ್ನಗಿರಿ ವಿಧನಸಭಾ ಕ್ಷೇತ್ರದಲ್ಲೂ ನಕಲಿ ಮತದಾನದ ಘಟನೆಗಳು ವರದಿಯಾಗಿವೆ. ಮಹಿಮಾ ಪಟೇಲ್‌ರ ಬೆಂಬಲಿಗರು ಇತರ ಮತದಾರರ ವೋಟುಗಳನ್ನು ಅಕ್ರಮವಗಿ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಪಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications