ಕಾಶ್ಮೀರ: ಮತಗಟ್ಟೆಗಳ ಮೇಲೆ ಉಗ್ರರ ಗ್ರೆನೇಡ್ ದಾಳಿ, ಇಬ್ಬರು ಬಲಿ
ಕಾಶ್ಮೀರ: ಮತಗಟ್ಟೆಗಳ ಮೇಲೆ ಉಗ್ರರ ಗ್ರೆನೇಡ್ ದಾಳಿ, ಇಬ್ಬರು ಬಲಿ
ವ್ಯಾಪಕ ಹಿಂಸಾಚಾರ, ಗ್ರೆನೇಡ್-ಗುಂಡಿನ ದಾಳಿ, ಸಾವು ನೋವು
ಅನೇಕ ಮತಗಟ್ಟೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಓರ್ವ ವ್ಯಕ್ತಿ ಫಜಲ್‌ಪುರ-ರಜಿಯಾಬಾದ್‌ನಲ್ಲಿ ಬಲಿಯಾಗಿದ್ದಾನೆ. ಅರಾಮ್‌ಪೊರ-ಸೊಪೂರ್ ಬೂತ್‌ನಲ್ಲಿ ಮತ್ತೊಬ್ಬ ರಕ್ಷಣಾ ಸಿಬ್ಬಂದಿ ಗ್ರೆನೇಡ್ ದಾಳಿಗೆ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಫಜಲ್‌ಪುರ್‌ದಲ್ಲೂ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು ಓರ್ವ ಸಿಆರ್‌ಪಿಎಫ್ ಪೇದೆ ಗಾಯಗೊಂಡಿದ್ದಾನೆ. ಉಗ್ರರ ದಾಳಿಯಲ್ಲಿ ಬಂಡೂಪೊರ-ಸಂಬ್ಲಾರ್‌ನಲ್ಲಿ ಮೂವರು ಕರ್ತವ್ಯನಿರತ ಸಿಬ್ಬಂದಿ ಹಾಗೂ ಓರ್ವ ಪೇದೆ ಗಾಯಗೊಂಡಿದ್ದಾರೆ. ಪಟ್ಟಾಣ್, ಹೈದರ್‌ಬೇಗ್, ಕಾಪೊರ ಮತ್ತು ಹಳೇ ಬಾರಾಮುಲ್ಲಗಳಲ್ಲೂ ದಾಳಿ ನಡೆದಿದೆ. ಕ್ರೀರಿ ಎಂಬಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಗಡಿರಕ್ಷಣಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications