Get Updates
Get notified of breaking news, exclusive insights, and must-see stories!

ಚುನಾವಣೆ ಎತ್ತ ಸಾಗುತ್ತಿದೆ? ‘ಈ-ಟೀವಿ’ಯಲ್ಲಿ ಸಮೀಕ್ಷೆಗಳ ಸಮೀಕ್ಷೆ

ಚುನಾವಣೆ ಎತ್ತ ಸಾಗುತ್ತಿದೆ? ‘ಈ-ಟೀವಿ’ಯಲ್ಲಿ ಸಮೀಕ್ಷೆಗಳ ಸಮೀಕ್ಷೆ
ಗಾಳಿಯ ಜಾಡು ಹಿಡಿದು- ದಟ್ಸ್‌ಕನ್ನಡದ ಶಾಮ್‌,‘ಲೋಕ್‌ನೀತಿ’ಯ ಸಂದೀಪ್‌ ಶಾಸ್ತ್ರಿ ಹಾಗೂ ಓಆರ್‌ಜಿ-ಮಾರ್ಗ್‌ನ ನಿರ್ದೇಶಕ ಜಿ.ಶೇಷಗಿರಿ.

  • ದಟ್ಸ್‌ಕನ್ನಡ ಡೆಸ್ಕ್‌
ಏಪ್ರಿಲ್‌ 20 ಹಾಗೂ 26ರಂದು ನಡೆಯುವ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ಕ್ಷಣಗಣನೆ ಆರಂಭವಾಗುವುದರೊಂದಿಗೆ, ವಿವಿಧ ಪಕ್ಷಗಳ ಪ್ರಚಾರ ಪರಾಕಾಷ್ಠೆ ಮುಟ್ಟಿದೆ. ಈ ಸಂದರ್ಭದಲ್ಲಿ ಬಾಗೇವಾಡಿಯಿಂದ ಬೆಂಗಳೂರಿನವರೆಗೆ, ರಾಜ್ಯದ ಜನತೆ ಕೇಳುತ್ತಿರುವ ಪ್ರಶ್ನೆ ಇಷ್ಟೇ- ಚುನಾವಣೆಗಳು ಎತ್ತ ಸಾಗುತ್ತಿವೆ? ಗಾಳಿ ಎತ್ತ ಬೀಸುತ್ತಿದೆ ? ಈ ಬಾರಿ ಕುರ್ಚಿ ಯಾರಿಗೆ?

ಜನತೆಯ ಪ್ರಶ್ನೆಗೆ ಉತ್ತರಿಸುವ ಪ್ರಯತ್ನಗಳು ವಿವಿಧ ನೆಲೆಯಲ್ಲಿ ನಡೆದಿವೆ. ಅನೇಕ ಮಾಧ್ಯಮಗಳು ತಮ್ಮದೇ ಆದ ಸಮೀಕ್ಷೆಗಳನ್ನು ಪ್ರಕಟಿಸಿವೆ. ಔಟ್‌ಲುಕ್‌, ಡೆಕ್ಕನ್‌ ಹೆರಾಲ್ಡ್‌, ಏಷ್ಯನ್‌ ಏಜ್‌, ದಿ ಹಿಂದೂ, ಎನ್‌ಡಿ ಟೀವಿ, ಓಆರ್‌ಜಿ-ಮಾರ್ಗ್‌, ಮುಂತಾದ ಮಾಧ್ಯಮ-ಸಂಸ್ಥೆಗಳು ಚುನಾವಣಾ ಸಮೀಕ್ಷೆ ನಡೆಸಿ ಪ್ರಕಟಿಸಿವೆ. ಆದರೆ, ಒಂದು ಸಮೀಕ್ಷೆ ಇದ್ದಂತೆ ಇನ್ನೊಂದಿಲ್ಲ . ಅಂಕಿಅಂಶಗಳು ಯಾವುದೋ ಒಂದು ನೆಲೆಗಟ್ಟಿನಲ್ಲಿ ಕೆಲವು ಸಾಮಾನ್ಯ ಅಂಶಗಳನ್ನು ತೋರಿಸಬಹುದಾದರೂ, ಒಟ್ಟಾರೆ ಸಮೀಕ್ಷೆಗಳು ಒಂದಕ್ಕಿಂಥ ಇನ್ನೊಂದು ವಿಭಿನ್ನ .

ಇದೀಗ, ಕನ್ನಡದ ಜನಪ್ರಿಯ ವಾಹಿನಿ ‘ಈ-ಟೀವಿ ಕನ್ನಡ’ ಚುನಾವಣೆಗಳು ಸಾಗುತ್ತಿರುವ ಜಾಡನ್ನು ಗುರ್ತಿಸುವ ಪ್ರಯತ್ನ ನಡೆಸಿದೆ. ಈ-ಟೀವಿ ವಾಹಿನಿ ಸಮೀಕ್ಷೆಯನ್ನೇನೂ ನಡೆಸಿಲ್ಲ ; ಬದಲಿಗೆ ಈವರೆಗೆ ಪ್ರಕಟವಾಗಿರುವ ಸಮೀಕ್ಷೆಗಳನ್ನು ಗುಡ್ಡೆ ಹಾಕಿಕೊಂಡು ಅವುಗಳ ಮೂಲಕ ಚುನಾವಣೆಯ ದಿಕ್ಕುದೆಸೆಗಳನ್ನು ಗುರ್ತಿಸುವ ಪ್ರಯತ್ನ ಮಾಡುತ್ತಿದೆ. ಪ್ರತಿ ಭಾನುವಾರ ರಾತ್ರಿ 9ರಿಂದ 10ರವರೆಗೆ ಪ್ರಸಾರವಾಗುವ ‘ರಾಜಕಾರಣ’ ಕಾರ್ಯಕ್ರಮದಲ್ಲಿ ಚುನಾವಣೆಯ ದಿಕ್ಕುದೆಸೆ ಗುರ್ತಿಸುವ ಪ್ರಯತ್ನ ನಡೆಯಲಿದೆ.

ದಟ್ಸ್‌ಕನ್ನಡ.ಕಾಂ ಸಂಪಾದಕ ಎಸ್‌.ಕೆ.ಶಾಮಸುಂದರ್‌ ನಡೆಸಿಕೊಡುವ ‘ರಾಜಕಾರಣ’ ಈ-ಟೀವಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು . ಉಬ್ಬರ-ಆವೇಶಗಳಿಲ್ಲದೆ ತಣ್ಣನೆ ಶೈಲಿ ಹಾಗೂ ನಿರ್ವಿಕಾರವಾಗಿ ಶಾಮ್‌ ನಡೆಸಿಕೊಡುವ ‘ರಾಜಕಾರಣ’ ಕಾರ್ಯಕ್ರಮ ಕನ್ನಡದ ವಾಹಿನಿಗಳ ಮಟ್ಟಿಗೆ ಒಂದು ಹೊಸ ಪ್ರಯತ್ನ. ಪ್ರತಿಯಾಂದು ಸಂಗತಿಗೂ ಒಂದೊಂದು ಕಾರಣ ಇರುವುದು ಸಾಮಾನ್ಯ. ಆದರೆ ರಾಜಕಾರಣದ್ದು ವಿರಾಟ್‌ ಸ್ವರೂಪ. ಈ ಸ್ವರೂಪವನ್ನು ಅರ್ಥೈಸಿಕೊಳ್ಳುವ ಪ್ರಯತ್ನವೇ- ರಾಜಕಾರಣ. ನಾಡಿನ ವಿವಿಧ ಭಾಗಗಳ ಜನತೆ ತಮ್ಮ ಅನ್ನಿಸಿಕೆ-ಸಮಸ್ಯೆಗಳನ್ನು ವ್ಯಕ್ತಪಡಿಸಲು ವೇದಿಕೆಯಾಗಿ ಪರಿಣಮಿಸಿರುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಈ ಬಾರಿಯ, ಅಂದರೆ ಏ.18ರ ಭಾನುವಾರದ ‘ರಾಜಕಾರಣ’ದ ಕಂತು ಚುನಾವಣೆಗಳ ದಿಕ್ಕುದೆಸೆಗಳನ್ನು ಪ್ರಕಟಿತ ಸಮೀಕ್ಷೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಿಕ್ಕೆ ಮೀಸಲು.

‘ಲೋಕ್‌ನೀತಿ’ಯ ಸಂದೀಪ್‌ ಶಾಸ್ತ್ರಿ ಹಾಗೂ ಓಆರ್‌ಜಿ-ಮಾರ್ಗ್‌ನ ನಿರ್ದೇಶಕ ಜಿ.ಶೇಷಗಿರಿ ಏ.18ರ ರಾಜಕಾರಣದ ಚರ್ಚೆಯಲ್ಲಿ ಶಾಮ್‌ ಅವರೊಂದಿಗೆ ಭಾಗವಹಿಸುವರು. ರಾಜಕಾರಣದ ಸಮಗ್ರ ಅಂಕಿಅಂಶಗಳ ಸಂಗ್ರಹಣೆಯಲ್ಲಿ ಸಂದೀಪ್‌ ಶಾಸ್ತ್ರಿ ಎತ್ತಿದ ಕೈ. ರಾಜ್ಯಾದ್ಯಂತ ಅಧ್ಯಯನ ಪ್ರವಾಸ ನಡೆಸಿರುವ ಸಂದೀಪ್‌ ಜನತೆಯ ನಾಡಿಮಿಡಿತ ಬಲ್ಲರು. ಇನ್ನು , ಓಆರ್‌ಜಿ-ಮಾರ್ಗ್‌ ಸಮೀಕ್ಷೆ ನಡೆಸುವುದರಲ್ಲಿ ಹೆಸರುಗಳಿಸಿರುವ ಸಂಸ್ಥೆ .

ಚುನಾವಣೆ ಎತ್ತ ಸಾಗುತ್ತಿದೆ? ಎನ್ನುವ ಕುತೂಹಲ ನಿಮಗೂ ಇದೆಯಲ್ಲವೆ ? ಹಾಗಿದ್ದಲ್ಲಿ , ಏ.18 ರ ರಾತ್ರಿ 9ಕ್ಕೆ ಈ-ಟೀವಿ ಕನ್ನಡ ವಾಹಿನಿಯಾಂದಿಗೆ ಮುಖಾಮುಖಿಯಾಗಿ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+