ಜನರ ಕಣ್ಣು ತಪ್ಪಿಸಿ ಜೈಲಿನಿಂದ ಹೊರಬಂದ ಮುತ್ತಪ್ಪ ರೈ ಅಜ್ಞಾತ ಸ್ಥಳಕ್ಕೆ

ಜನರ ಕಣ್ಣು ತಪ್ಪಿಸಿ ಜೈಲಿನಿಂದ ಹೊರಬಂದ ಮುತ್ತಪ್ಪ ರೈ ಅಜ್ಞಾತ ಸ್ಥಳಕ್ಕೆ
ನಾನು ಎಲ್ಲಿದ್ದರೂ ಸುಖವಾಗಿರುತ್ತೇನೆ ಎಂದ ರೈ

ಬೆಂಗಳೂರು : ಭೂಗತ ಲೋಕದ ದೊರೆ ಎಂದೇ ಹೆಸರಾದ ಮುತ್ತಪ್ಪ ರೈ 23 ತಿಂಗಳುಗಳ ಜೈಲು ವಾಸದ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದಾನೆ.

ಮುತ್ತಪ್ಪ ರೈ, ಏ.16ರ ಶುಕ್ರವಾರ ಮಧ್ಯಾಹ್ನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದು , ಜೀವಭಯದಿಂದ ಆಜ್ಞಾತ ಸ್ಥಳಕ್ಕೆ ತೆರಳಿದ್ದಾನೆ. ಗುರುವಾರ ಸಂಜೆಯೇ ಮುತ್ತಪ್ಪ ರೈ ಬಿಡುಗಡೆಯಾಗುತ್ತದೆ ಎನ್ನುವ ನಿರೀಕ್ಷೆಯಿಂದ ಕಾರಾಗೃಹದ ಎದುರು ಜನ ಜಂಗುಳಿಯೇ ನೆರೆದಿತ್ತು . ಆದರೆ ತಾಂತ್ರಿಕ ಕಾರಣಗಳಿಂದ ಮುತ್ತಪ್ಪ ರೈ ಬಿಡುಗಡೆ ಗುರುವಾರ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಎರಡು ವರ್ಷಗಳ ನಂತರ ಮಗನೊಂದಿಗೆ ಕಾಲ ಕಳೆಯಲು ಅವಕಾಶ ದೊರೆತಿರುವ ಬಗ್ಗೆ ಜೈಲಿನಿಂದ ಬಿಡುಗಡೆ ಆಗಿರುವ ಸಂದರ್ಭದಲ್ಲಿ ಮುತ್ತಪ್ಪ ರೈ ಹರ್ಷ ವ್ಯಕ್ತಪಡಿಸಿದರು. ಒಳ್ಳೆಯವರ ಮನಸ್ಸು ಎಲ್ಲಿದ್ದರೂ ಒಳ್ಳೆಯದೇ ಆಗಿರುತ್ತದೆ. ನಾನು ಎಲ್ಲಿದ್ದರೂ ಸುಖವಾಗಿರುತ್ತೇನೆ ಎಂದು ರೈ ಹೇಳಿದರು. ಸುದ್ದಿಗಾರರ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದ ಮುತ್ತಪ್ಪ ರೈ ತಮಗಾಗಿ ಕಾಯುತ್ತಿದ್ದ ಬುಲೆಟ್‌ ಪ್ರೂಫ್‌ ಕಾರಿನಲ್ಲಿ ಕುಳಿತು ಅಜ್ಞಾತ ಸ್ಥಳಕ್ಕೆ ತೆರಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+