‘ಮಿಸ್‌ ಕಂಟ್ರಿಕ್ಲಬ್‌’ ಕಾರ್ಯಕ್ರಮಕ್ಕಾಗಿ ಬೆಂಗಳೂರಲ್ಲಿ ಬಿಪಾಶಾಬಸು

‘ಮಿಸ್‌ ಕಂಟ್ರಿಕ್ಲಬ್‌’ ಕಾರ್ಯಕ್ರಮಕ್ಕಾಗಿ ಬೆಂಗಳೂರಲ್ಲಿ ಬಿಪಾಶಾಬಸು
ಸೌಂದರ್ಯ ಸ್ಪರ್ಧೆಗೆ ಬಡಕಟ್ಟು ಜನಾಂಗದ ಟಚ್‌

ಬೆಂಗಳೂರು: ಬಾಲಿವುಡ್‌ನ ಬೆಡಗಿ ಬಿಪಾಶಾ ಬಸು ಬೆಂಗಳೂರಿಗೆ ಬಂದಿದ್ದಾಳೆ. ಬಂದಿರುವುದು ಗಾಂಧಿನಗರಕ್ಕಲ್ಲ ; ಕಂಟ್ರಿಕ್ಲಬ್‌ಗೆ ! ಏಪ್ರಿಲ್‌ 17 ರಂದು ಕಂಟ್ರಿ ಕ್ಲಬ್‌ನಲ್ಲಿ ನಡೆಯುವ ‘ಮಿಸ್‌ ಕಂಟ್ರಿಕ್ಲಬ್‌’ ಕಾರ್ಯಕ್ರಮವನ್ನು ನಡೆಸಿಕೊಡಲು ಬಿಪಾಶಾ ಬೆಂಗಳೂರಿಗೆ ಬಂದಿಳಿದಿದ್ದಾಳೆ.

‘ಮಿಸ್‌ ಕಂಟ್ರಿಕ್ಲಬ್‌’ ಬರಿಯ ಸೌಂದರ್ಯ ಸ್ಪರ್ಧೆಯಲ್ಲ. ಶಿಲ್ಪಿ ಚೌಧರಿಯವರ ಮುಂದಾಳತ್ವದಲ್ಲಿ ಇದಕ್ಕೆ ಒಂದು ಮಹತ್ವದ ‘ಥೀಂ’ ನೀಡಲಾಗಿದೆ. ಸೌಂದರ್ಯ ಸ್ಪರ್ಧೆಗಳು ಕೇವಲ ಸ್ಪರ್ಧಿಗಳ ಬುದ್ಧಿಮತ್ತೆ ಹಾಗೂ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜಕ್ಕೆ ಒಂದು ಸಂದೇಶ ನೀಡುವಂತಿರಬೇಕು ಎಂಬುದು ಶಿಲ್ಪಿಯವರ ಅಭಿಪ್ರಾಯ.

‘ಮಿಸ್‌ ಕಂಟ್ರಿಕ್ಲಬ್‌’ ಸ್ಪರ್ಧೆಗೆ ಬಡಕಟ್ಟು ಜನಾಂಗದ ಟಚ್‌ ಕೊಡಲಾಗಿದೆ. ಅಸ್ಸಾಂ, ಮಿರೆkೂೕರಾಂ, ಮಣಿಪುರಿ ಮುಂತಾದ ರಾಜ್ಯಗಳ ಬುಡಕಟ್ಟು ಜನಾಂಗದವರ ವೇಷಭೂಷಣಗಳನ್ನು ಸ್ಪರ್ಧಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಶಿಲ್ಪಿ ಸುದ್ದಿಗಾರರಿಗೆ ತಿಳಿಸಿದರು.

*

ಸೌಂದರ್ಯ ಸ್ಪರ್ಧೆ ಸಂದರ್ಭದಲ್ಲಿ ಎಲ್ಲೋ ಓದಿದ ಈ ಸಾಲುಗಳು ನೆನಪಾಗುತ್ತವೆ:

ಅಂದಿನ ಜನರಿಗೆ
‘ಅರಿವಿ’ದ್ದರೂ
ತೊಡಲು ‘ಅರಿವೆ’ಯಿರಲಿಲ್ಲ ;
ಇಂದಿನ ಜನರಿಗೆ,
‘ಅರಿವೆ’ಯಿದ್ದರೂ
‘ಅರಿವು’ ಮಾತ್ರ ಉಳಿದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+