ಪ್ರಯಾಣಿಕರಿಗೆ ಸೂಕ್ತ ಸಾರಿಗೆವ್ಯವಸ್ಥೆ ಕಲ್ಪಿಸಲು ಹೈಕೋರ್ಟ್‌ ಆದೇಶ

ಪ್ರಯಾಣಿಕರಿಗೆ ಸೂಕ್ತ ಸಾರಿಗೆವ್ಯವಸ್ಥೆ ಕಲ್ಪಿಸಲು ಹೈಕೋರ್ಟ್‌ ಆದೇಶ
ಪ್ರಯಾಣಿಕರ ಹಿತಕ್ಕಾಗಿ ‘ಕರಾರಸಾಸಂ ಮತ್ತು ಬೆಂಮಸಾ ಪ್ರಯಾಣಿಕರ ಸಂಘಟನೆ’

ಬೆಂಗಳೂರು : ಸಾರಿಗೆ ವ್ಯವಸ್ಥೆಯನ್ನು ಸಕಾಲದಲ್ಲಿ ಸಮರ್ಪಕ ರೀತಿಯಲ್ಲಿ ಪರಿಶೀಲಿಸುತ್ತಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ ಆಜ್ಞೆ ನೀಡಿದೆ. ಅಲ್ಲದೆ ‘ಕರ್ನಾಟಕ ಮೋಟಾರ್‌ ವೆಹಿಕಲ್‌ ಕಾಯಿದೆ’ ಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ರಾಜ್ಯ ಸಾರಿಗೆ ವಿಭಾಗಕ್ಕೆ ನಿರ್ದೇಶಿಸಿದೆ. ಬಸ್ಸಿನಲ್ಲಿ ಹೆಚ್ಚಿದ ನೂಕು ನುಗ್ಗಲನ್ನು ಉದ್ದೇಶಿಸಿ ಬಂದಿದ್ದ ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

‘ಕರಾರಸಾಸಂ ಮತ್ತು ಬೆಂಮಸಾ ಪ್ರಯಾಣಿಕರ ಸಂಘಟನೆ’ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಸಂಘಟನೆಯು ಪ್ರಯಾಣಿಕರಿಗೆ ಸೂಕ್ತ ದರದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮತ್ತು ಪ್ರಯಾಣಿಕರ ತೊಂದರೆಗಳನ್ನು ನಿವಾರಿಸಲು ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿಕೊಂಡಿದೆ.

ರಾಜ್ಯ ಸರಕಾರ ಸಾರಿಗೆ ವ್ಯವಸ್ಥೆಗಾಗಿಯೇ ‘ಕರಾರಸಾಸಂ’ ಮತ್ತು ’ಬೆಂಮಸಾ’ ಎಂಬ ಎರಡು ಸಂವಿಧಾನಾತ್ಮಕ ವಿಭಾಗವನ್ನು ನಡೆಸುತ್ತಿದೆ. ಇದು ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲೆಂದೇ ಆರಂಭವಾಗಿದೆ . ಆದರೆ ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅನುಗುಣವಾಗಿ ಇವು ಬದಲಾವಣೆಯನ್ನು ಮಾಡಿಲ್ಲ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳನ್ನು ಒಳಗೊಂಡಂತೆ ಪ್ರಯಾಣಿಕರಿಗೆ ಬಹಳ ಕಷ್ಟವಾಗುತ್ತಿದೆ ಎಂದು ಸಂಘಟನೆ ತನ್ನ ಅಪೀಲಿನಲ್ಲಿ ಹೇಳಿಕೊಂಡಿದೆ.

ಇದಕ್ಕೆ ಉತ್ತರಿಸಿರುವ ಸಾರಿಗೆ ವ್ಯವಸ್ಥೆ ಅಧಿಕಾರಿಗಳು ನವಂಬರ್‌2002ರಲ್ಲಿ 2658 ಬಸ್ಸುಗಳು ಸಂಚರಿಸುತ್ತಿದ್ದವು. ಈಗ ಅಂದರೆ 2004ರ ಮಾರ್ಚ್‌ನಲ್ಲಿ ಬಸ್ಸುಗಳ ಸಂಖ್ಯೆ 3291 ಇದೆ. ಇದರಲ್ಲಿ 706 ಖಾಸಗಿಯವರಿಂದ ಬಾಡಿಗೆಗೆ ಪಡೆದ ಬಸ್ಸುಗಳು ಇವೆ ಎಂದು ಅಂಕಿ ಅಂಶ ನೀಡಿದ್ದಾರೆ. ಇನ್ನಷ್ಟು ಬಸ್ಸುಗಳನ್ನು ಹೆಚ್ಚಿಸುವ ಯೋಜನೆಯನ್ನು ಈ ಆರ್ಥಿಕ ವರ್ಷದಲ್ಲಿ ಆಯೋಜಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಪರ-ವಿರೋಧ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎನ್‌.ಕೆ.ಜೈನ್‌ ಮತ್ತು ವಿ.ಜಿ.ಸಭಾಹಿತ್‌ ಮೇಲಿನ ಆದೇಶವನ್ನು ಹೊರಡಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+