ರಾಜೀವ್‌ಹತ್ಯೆಯ ನೀಲನ್ ಎಲ್‌ಟಿಟಿಇಆಂತರಿಕ ಬಂಡಾಯಕ್ಕೆ ಬಲಿ
ರಾಜೀವ್‌ಹತ್ಯೆಯ ನೀಲನ್ ಎಲ್‌ಟಿಟಿಇಆಂತರಿಕ ಬಂಡಾಯಕ್ಕೆ ಬಲಿ
‘ಎಲ್‌ಟಿಟಿಇ’ನಿಂದ ಸಿಡಿದೆದ್ದ ‘ಕರುಣ ತಂಡ’ದ ಕೃತ್ಯ
ಎಲ್‌ಟಿಟಿಇ ಬಂಡಾಯ ನಾಯಕ ‘ಕರುಣ’ ಖ್ಯಾತಿಯ ವಿನಾಯಗ ಮೂರ್ತಿ ಮುರಳೀಧರನ್‌ನನ್ನು ಗುಂಡಿಟ್ಟು ಕೊಂದಿದ್ದಾನೆ. ಆತ ಶ್ರಿಲಂಕಾದ ಪೂರ್ವ ಪ್ರದೇಶದ ಜಿಲ್ಲೆಯಾದ ಬಾಟಿಕಲೋವಕ್ಕೆ ಬಂಡಾಯವೆದ್ದು ತೆರಳುವ ಮುನ್ನ ಈ ಹತ್ಯೆ ಮಾಡಿದ್ದಾನೆ. ನೀಲನ್ ಬಂಡಾಯ ಉಂಟಾಗುವ ಮುನ್ನ ಕರುಣನ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಪ್ರಭಾಕರನ್ ನಿಷ್ಠನಾಗಿದ್ದ ಎಂದು ನಂಬಲಾಗಿದೆ. ಈತ ಎಲ್‌ಟಿಟಿಇಯ ಹಲವು ಯೋಜನೆಗಳ ಯಶಸ್ವಿಗೆ ಕಾರಣನಾಗಿದ್ದ ಎಂದು ಸೇನಾ ಹಾಗೂ ಎಲ್‌ಟಿಟಿಇ ಮೂಲಗಳು ಹೇಳಿವೆ.
ಬಂಡಾಯಗಾರ ಕರುಣ ನೀಲನ್‌ನನ್ನು ಸೆರೆ ಹಿಡಿದ ಬಳಿಕ ಭಾರತ ಸರಕಾರಕ್ಕೆ ಒಪ್ಪಿಸ ಬಹುದು ಎಂದು ಈ ಹಿಂದೆ ನಂಬಲಾಗಿತ್ತು . ಈತನಲ್ಲದೆ ಇನ್ನು ಐವರು ಕರುಣ ತಂಡದ ಸೆರೆಯಲ್ಲಿದ್ದಾರೆ. ಅವರು ಭಾರತ ಹಾಗೂ ಶ್ರಿಲಂಕಾ ಸರಕಾರಕ್ಕೆ ಹಲವು ಕೃತ್ಯಗಳಿಂದ ಅಗತ್ಯವಾಗಿ ಬೇಕಾದವರಾಗಿದ್ದಾರೆ. ಕಳೆದ ಮಾರ್ಚ್3ರಂದು ಕರುಣ ಎಲ್‌ಟಿಟಿಯಿಂದ ಬಂಡಾಯವೆದ್ದು ಹೋಗಿ, ಬೇರೆ ತಂಡ ರಚಿಸಿದ್ದ.
ನೀಲನ್‌ನ ಕಾರ್ಯವೈಖರಿ ಮೆಚ್ಚಿ ಎಲ್‌ಟಿಟಿಇ ಲೆಫ್ಟಿನೆಂಟ್ ಕರ್ನಲ್ ಎಂಬ ಪದಾಂಕಿತ ನೀಡಿತ್ತು. ಈಗ ಎಲ್‌ಟಿಟಿಇ ಆಂತರಿಕ ಬಂಡಾಯ ಭುಗಿಲೆದ್ದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications