ಪ್ರಿಯ ಜೇಠ್ಮಲಾನಿ, ನಾಮಪತ್ರ ವಾಪಸ್ಸು ಪಡೆಯಿರಿ -ವಾಜಪೇಯಿ
ಪ್ರಿಯ ಜೇಠ್ಮಲಾನಿ, ನಾಮಪತ್ರ ವಾಪಸ್ಸು ಪಡೆಯಿರಿ -ವಾಜಪೇಯಿ
ಜೇಠ್ಮಲಾನಿ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಲು ಬದ್ಧ ಎಂದ ಪ್ರಧಾನಿ
ಕಳೆದ ನಾಲ್ಕು ದಶಕಗಳಿಂದ ನಾನೂ ಹಾಗೂ ಜೇಠ್ಮಲಾನಿ ಸ್ನೇಹಿತರಾಗಿದ್ದೇವೆ. ಈ ಚುನಾವಣೆ ಬಹುಶಃ ನಮ್ಮಿಬ್ಬರಿಗೂ ಕೊನೆಯ ಚುನಾವಣೆಯಾಗಿದೆ. ಈ ಸ್ಪರ್ಧೆಯಲ್ಲಿ ಜೇಠ್ಮಲಾನಿ ಅವರು ನಾಮಪತ್ರ ವಾಪಸ್ಸು ಪಡೆಯಬೇಕೆಂದು ತಾವು ಕೋರುವುದಾಗಿ ವಾಜಪೇಯಿ ಏ.14ರ ಬುಧವಾರ ಹೇಳಿದರು.
ಜೇಠ್ಮಲಾನಿ ಅವರು ಪ್ರತಿಪಾದಿಸುವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಮಾಧ್ಯಮ ಸ್ವಾತಂತ್ರ್ಯ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮುಂತಾದ ವಿಷಯಗಳಿಗೆ ತಮ್ಮ ಸಹಮತವೂ ಇದೆ. ಈ ಬಾರಿ ಲಖನೌದಿಂದ ಆರಿಸಿಬಂದಲ್ಲಿ ಜೇಠ್ಮಲಾನಿ ಪ್ರತಿಪಾದಿಸಿರುವ ವಿಷಯಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಪ್ರಧಾನಿ ವಾಜಪೇಯಿ ತಿಳಿಸಿದರು. ಜೇಠ್ಮಲಾನಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿರುವುದು ಸರಿಯಲ್ಲ ಎಂದ ವಾಜಪೇಯಿ, ಚುನಾವಣೆ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲದು ಎಂದು ಅಭಿಪ್ರಾಯಪಟ್ಟರು
ವಾಜಪೇಯಿ ಅವರ ಹೇಳಿಕೆಗೆ ಮುಂಬಯಿಯಲ್ಲಿ ಪ್ರತಿಕ್ರಿಯಿಸಿರುವ ಜೇಠ್ಮಲಾನಿ, ತಮ್ಮನ್ನು ಬೆಂಬಲಿಸಿರುವ ಪಕ್ಷಗಳನ್ನು ಸಂಪರ್ಕಿಸಿದ ನಂತರ ತಮ್ಮ ತೀರ್ಮಾನವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications