ಬಿಜೆಪಿ ಪ್ರಚಾರಕ್ಕಾಗಿ ಬಂದ ‘ಹಿತಾನುಭವಿ’ ಅನಿವಾಸಿ ಭಾರತೀಯರು
ಬಿಜೆಪಿ ಪ್ರಚಾರಕ್ಕಾಗಿ ಬಂದ ‘ಹಿತಾನುಭವಿ’ ಅನಿವಾಸಿ ಭಾರತೀಯರು
ವಿದೇಶದಲ್ಲೂ ಭಾರತ ಪ್ರಕಾಶಿಸುತ್ತಿದೆ! ‘ಓವರಸೀಸ್ ಫ್ರೆಂಡ್ಸ್ ಸಂಘ’ದ ಪ್ರಚಾರ ಸೇವೆ
ಅಮೇರಿಕಾ ಮೂಲದ ‘ಓವರಸೀಸ್ ಫ್ರೆಂಡ್ಸ್ ಸಂಘ’ದ ಸುಮಾರು 20 ಅನಿವಾಸಿ ಗೆಳೆಯರು ಬಿಜೆಪಿ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾರೆ. ಅವರು ಮುಂದಿನ ಐದು ವರ್ಷಗಳಿಗೆ ವಾಜಪೇಯಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದ ಅಗತ್ಯವನ್ನು ಕುರಿತು ಭಾರತೀಯ ಮತದಾರರಿಗೆ ವಿವರಿಸಲಿದ್ದಾರೆ.
ಈ ಭಾರತೀಯ ಮೂಲದವರ ಪ್ರಕಾರ ಎಲ್ಲಾ ವಿಭಾಗದಲ್ಲಿ ಯೂ ಬಿಜೆಪಿ ನೇತೃತ್ವದ ಸರಕಾರ ಮಹತ್ವದ ಸಾಧನೆ ಮಾಡಿದೆ. ‘ಫೀಲ್ ಗುಡ್ ಫ್ಯಾಕ್ಟರ್’ ಭಾರತದಲ್ಲಿ ಮಾತ್ರ ಕೇಳಿ ಬರುವುದಲ್ಲ. ಭಾರತದ ಬೌಂಡರಿ ಮೀರಿ ವಿದೇಶದಲ್ಲಿರುವ 20 ಮಿಲಿಯನ್ ಭಾರತೀಯರಿಗೂ ಸರಕಾರದ ನಿರ್ವಹಣೆಯ ಹಿತಾನುಭವವಾಗುತ್ತಿದೆ ಎಂದು ಸಂಘದ ಮಾಜಿ ಅಧ್ಯಕ್ಷ ದಿನೇಶ್ ಅಗರ್‌ವಾಲ್ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರು ವಾಜಪೇಯಿ ಸರಕಾರಕ್ಕೆ ತುಂಬಾ ಋಣಿಗಳಾಗಿದ್ದಾರೆ. ದ್ವಿ ಪೌರತ್ವ, ಸಡಿಲಗೊಂಡ ವಿದೇಶಿ ಕಾನೂನುಗಳು ಮತ್ತು ಬಂಡವಾಳ ಹೂಡಿಕೆಗೆ ಸಡಿಲಗೊಂಡ ನಿಯಮಗಳಿಂದ ಅವರು ಸಂತುಷ್ಟರಾಗಿದ್ದಾರೆ ಎನ್ನುವುದು ದಿನೇಶ್ ಅಭಿಪ್ರಾಯ.
ಹದಿಮೂರು ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಘಟನೆಯ ಅಂಗ ಸಂಸ್ಥೆಗಳು ಅಮೇರಿಕಾ, ಇಂಗ್ಲೆಂಡ್, ಕೆನಡಾದಲ್ಲಿದೆ. ಈ ಸಂಘಟನೆಯು ವಿದೇಶದಲ್ಲಿ ಭಾರತ ಮತ್ತು ಬಿಜೆಪಿಯ ಪರವಾದ ನಿಲುವನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಹಾಗೂ ಅವರ ವಿರೋಧಿಗಳು ಮೂಡಿಸಿದ ಕರಿಛಾಯೆಯನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ದಿನೇಶ್ ವಿವರಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications