ಬೆಂಗಳೂರಲ್ಲಿ ಪ್ರಧಾನಿ ವಾಜಪೇಯಿಗೆ ಸಾಯಿಬಾಬಾ ಆಶೀರ್ವಾದ
ಬೆಂಗಳೂರಲ್ಲಿ ಪ್ರಧಾನಿ ವಾಜಪೇಯಿಗೆ ಸಾಯಿಬಾಬಾ ಆಶೀರ್ವಾದ
ಬಾಬಾ ಜೊತೆ ವಾಜಪೇಯಿ 55 ನಿಮಿಷ ಚರ್ಚೆ
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸತ್ಯ ಸಾಯಿಬಾಬಾ ಆಶ್ರಮಕ್ಕೆ ಏಪ್ರಿಲ್ 14 ರ ಬುಧವಾರ ಭೇಟಿ ಕೊಟ್ಟ ಪ್ರಧನಿ ವಾಜಪೇಯಿ, ಬಾಬಾ ಅವರ ಆಶೀರ್ವಾದ ಪಡೆದರು. ಪ್ರಧಾನಿಗಳ ಕುಟುಂಬದ ಎಲ್ಲ ಸದಸ್ಯರಿಗೂ ಬಾಬಾ ಆಶೀರ್ವಾದ ಮಾಡಿದರು. ಸುಮಾರು 55 ನಿಮಿಷಗಳ ಕಾಲ ಪ್ರಧಾನಿ ಹಾಗೂ ಸಾಯಿಬಾಬಾ ಮಾತುಕತೆ ನಡೆಸಿದರು.
ಸಾಯಿಬಾಬಾ ಭೇಟಿಯ ಸಂದರ್ಭದಲ್ಲಿ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ, ಅಳಿಯ ರಂಜನ್ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕಾ ಹಾಜರಿದ್ದರು. ಪ್ರಧಾನಿ ಪರಿವಾರದೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತ್ ಕುಮಾರ್ ಕೂಡ ಸಾಯಿಬಾಬಾ ಆರ್ಶೀರ್ವಾದ ಪಡೆದರು.
ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ವಾಜಪೇಯಿ ಬೆಂಗಳೂರಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ವಾಜಪೇಯಿ ಮಾತನಾಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications