ಅಬ್ಬಬ್ಬಾ ನಾನ್ನೂರು ! ಸಾಲು ವಿಶ್ವದಾಖಲೆಗಳ ಬರೆದ ಬ್ರಿಯಾನ್‌ಲಾರ
ಅಬ್ಬಬ್ಬಾ ನಾನ್ನೂರು ! ಸಾಲು ವಿಶ್ವದಾಖಲೆಗಳ ಬರೆದ ಬ್ರಿಯಾನ್‌ಲಾರ
ಲಾರಾ, ಎರಡು ತ್ರಿಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿದ ಎರಡನೆ ಆಟಗಾರ
ಇದು ವೀಕ್ಷಕ ವಿವರಣೆಗಾರನ ಹರ್ಷಚಿತ್ತನುಡಿ. ಮತ್ತದೇ ದಾಖಲೆ, ಆದೇ ದಾಂಡಿಗ, ಅದೇ ಅಂಗಣ, ಮತ್ತದೇ ತಂಡದೆದುರರು. ಹತ್ತು ವರ್ಷಗಳ ಬಳಿಕ ಮರುಕಳಿಸಿದ ವಿಶ್ವ ವಿಕ್ರಮದ ಇನ್ನಿಂಗ್ಸ್ ಅದು . ಮತ್ತದೇ ನೆನಪು...
ವೆಸ್ಟಿಂಡೀಸ್ ತಂಡದ ನಾಯಕ ಬ್ರಿಯಾನ್ ಲಾರಾ ಅಜೇಯ 400ರನ್ನುಗಳನ್ನು ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ್ದಾಗ ಮೈದಾನದ ತುಂಬಾ ಹರ್ಷದ ಹುಚ್ಚುಹೊಳೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು, ಎದುರಾಳಿ ಇಂಗ್ಲೆಂಡ್ ತಂಡದ ಆಟಗಾರರು ವಿಶ್ವವಿಕ್ರಮ ಮೆರೆದ ಆಟಗಾರನನ್ನು ಅಭಿನಂದಿಸಿದರು.
ಈಮುನ್ನ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹೆಸರಿನಲ್ಲಿದ್ದ 380 ರನ್ನುಗಳ ಗರಿಷ್ಠ ಮೊತ್ತದ ದಾಖಲೆಯನ್ನು ಲಾರಾ ಮತ್ತೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನದಲ್ಲಿ ಭೋಜನ ವಿರಾಮಕ್ಕೆ ಮುನ್ನ ಬಾಲನ್ನು ಸಿಕ್ಸ್‌ಗೆ ಎತ್ತುವ ಮೂಲಕ ದಾಖಲೆ ಸರಿದೂಗಿಸಿದ ಲಾರಾ, ಮತ್ತವರ ಬೌಲಿಂಗಿನಲ್ಲೇ ಬೌಂಡರಿ ಬಾರಿಸುವ ಮೂಲಕ ಇತಿಹಾಸ ಬರೆದರು.
ಈ ನಾಲ್ಕುನೂರರ ಮೂಲಕ ಲಾರಾ ಎರಡು ತ್ರಿಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿದ ಎರಡನೆ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು. ಈ ಹಿಂದೆ ಬ್ರಾಡ್‌ಮನ್ ಮಾತ್ರ ಎರಡು ತ್ರಿಶತಕ ಬಾರಿಸಿದ್ದರು. ಆದರೆ ಲಾರಾರ ವೈಯುಕ್ತಿಕ ಗಳಿಕೆ ಅವರಿಗಿಂತ ಹೆಚ್ಚು.
ಪ್ರಸ್ತುತ ಅಂಗಣದಲ್ಲಿರುವ ಆಟಗಾರರ ಪೈಕಿ ಅತಿ ಹೆಚ್ಚು ರನ್ ಗಳಿಸಿದ(9657)ಆಟಗಾರ. ಆಸ್ಟ್ರೇಲಿಯಾದ ಹೇಡನ್ 380 ದಾಖಲಿಸಿದ್ದು ಜಿಂಬಾಬ್ವೆ ವಿರುದ್ಧ . ಕೊಲ್ಕತ್ತಾದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದಾಗ ಹಾಗೂ ತವರು ನೆಲದಲ್ಲೇ ಆಸ್ಟ್ರೇಲಿಯಾ ಭಾರತದಿಂದ ಸೋಲುಂಡಾಗ ಹುಚ್ಚೆದ್ದು ಕುಣಿದಿದ್ದ ಲಾರಾಗೆ ಭಾರತವೆಂದರೆ ಅಭಿಮಾನ. ಈ ಅಭಿಮಾನದ ಕ್ರಿಕೆಟಿಗನಿಗೆ ಇನ್ನಷ್ಟು ಸಾಧನೆಯ ಗರಿಗಳು ಸಲ್ಲಲಿ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications