ತೆಲುಗು ಭಾಷಿಕರ ಸೆಳೆಯಲು ಬಿಜೆಪಿಯಿಂದ ನಟಿ ವಿಜಯಶಾಂತಿ ಗಾಳ
ತೆಲುಗು ಭಾಷಿಕರ ಸೆಳೆಯಲು ಬಿಜೆಪಿಯಿಂದ ನಟಿ ವಿಜಯಶಾಂತಿ ಗಾಳ
ಬಿಜೆಪಿ ಅಭ್ಯರ್ಥಿಗಳಿಗೆ ಓಟು ನೀಡುವ ಮೂಲಕ ವಾಜಪೇಯಿ ಅವರನ್ನು ಬೆಂಬಲಿಸಲು ಮನವಿ
ನಟಿ ವಿಜಯಶಾಂತಿ ಏ.11ರ ಭಾನುವಾರ ತುಮಕೂರು ಜಿಲ್ಲೆಯ ಪಾವಗಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.
ಪ್ರಧನಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತ ಪ್ರಕಾಶಿಸುತ್ತಿದ್ದು , ದೇಶದ ಮುಂದಿನ ದಿನಗಳ ಭವಿಷ್ಯಕ್ಕಾಗಿ ವಾಜಪೇಯಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುವಂತೆ ವಿಜಯಶಾಂತಿ ಜನರನ್ನು ಕೋರಿದರು. ಬಿಜೆಪಿಯ, ಪಾವಗಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೋಮ್ಲಾನಾಯ್ಕ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಪಿ.ಮೂಡಲಗಿರಿಯಪ್ಪನವರನ್ನು ಗೆಲ್ಲಿಸುವಂತೆ ವಿಜಯಶಾಂತಿ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ತೆಲುಗಿನಲ್ಲಿ ಮಾತನಾಡಿದ ವಿಜಯಶಾಂತಿಯವರ ಮಾತನ್ನು ಚಪ್ಪಾಳೆ ತಟ್ಟುವ ಮೂಲಕ ಅಭಿಮಾನಿಗಳು ಆಸ್ವಾದಿಸಿದರು. ಈ ಪ್ರಚಾರ ಸಭೆಗಳಲ್ಲಿ ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications