Get Updates
Get notified of breaking news, exclusive insights, and must-see stories!

ಬೆಳಗಾವಿ, ಬೆಂಗಳೂರುಗಳಲ್ಲಿ ಮಂಗಳವಾರ ವಾಜಪೇಯಿ ಭಾಷಣ

ಬೆಳಗಾವಿ, ಬೆಂಗಳೂರುಗಳಲ್ಲಿ ಮಂಗಳವಾರ ವಾಜಪೇಯಿ ಭಾಷಣ
ಪಕ್ಷದ ಪ್ರಚಾರಕ್ಕೆ ಪ್ರಧಾನಿ ಆಟಲ್‌ ಬಿಹಾರಿ ವಾಜಪೇಯಿ ಕರ್ನಾಟಕಕ್ಕೆ

ಬೆಂಗಳೂರು : ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಏಪ್ರಿಲ್‌ 13ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕಾರ್ಯ ಕೈಗೊಳ್ಳಲಿದ್ದಾರೆ.

ಕರ್ನಾಟಕದ ಉತ್ತರ ಭಾಗವಾದ ಬೆಳಗಾವಿ ಮತ್ತು ದಕ್ಷಿಣದ ಬೆಂಗಳೂರಿನ ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಅವರು ಚುನಾವಣಾ ಭಾಷಣ ಮಾಡಲಿದ್ದಾರೆ. ಇದರಿಂದ ಬಿಜೆಪಿಯ ಚುನಾವಣಾ ಪ್ರಕ್ರಿಯೆಗೆ ಹೊಸ ಹುರುಪು ಬರಲಿದೆ ಎಂದು ಪಕ್ಷದ ವಕ್ತಾರ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯಲ್ಲಿ ಮಂಗಳವಾರ ಬೆಳಗ್ಗೆ ಚುನಾವಣಾ ಸಭೆಯನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುವರು. ಮಂಗಲವಾರ ಸಂಜೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಅನೇಕ ರಾಷ್ಟ್ರೀಯ ನಾಯಕರುಗಳು ರಾಜ್ಯದಲ್ಲಿ ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ.

ಬಿಜೆಪಿ ಕರ್ನಾಟಕವನ್ನು ‘ದಕ್ಷಿಣದ ಹೆಬ್ಬಾಗಿಲು’ ಎಂದು ಪರಿಗಣಿಸಿದೆ. ಉಪಪ್ರಧಾನಿ ಎಲ್‌.ಕೆ. ಅಡ್ವಾಣಿಯ ‘ಭಾರತ ಉದಯ ಯಾತ್ರೆ’ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸಂಚರಿಸಿತ್ತು. ರಾಜ್ಯ ಬಿಜೆಪಿ ಘಟಕವು ‘ಕರ್ನಾಟಕ ಉದಯ ಯಾತ್ರೆ’ಯನ್ನುೂ ಹಮ್ಮಿಕೊಂಡಿದೆ. ಅಷ್ಟಲ್ಲದೆ ತೆಲುಗು ಪ್ರಭಾವ ಹೆಚ್ಚಾಗಿರುವ ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಸಾಯಿಕುಮಾರ್‌ ಮತ್ತು ವಿಜಯಶಾಂತಿ ಪ್ರಚಾರ ಮಾಡುತ್ತಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+