ಪ್ರಧಾನಿ ರ್ಯಾಲಿ ರಕ್ಷಣೆಯ ಹೊಣೆ ಹೊತ್ತ ಪೊಲೀಸಪ್ಪನ ‘ಗುಂಡು’ಕಥನ

ಪ್ರಧಾನಿ ರ್ಯಾಲಿ ರಕ್ಷಣೆಯ ಹೊಣೆ ಹೊತ್ತ ಪೊಲೀಸಪ್ಪನ ‘ಗುಂಡು’ಕಥನ
ಗುಂಡೇರಿದಾಗ ಹಾರಿದ ಗುಂಡು, ನಿಶಾಮತ್ತ ಅಧಿಕಾರಿ ವೈದ್ಯಕೀಯ ಪರೀಕ್ಷೆಗೆ

ರಾಂಚಿ : ಬಿಹಾರದ ಧಾಂಬಡಾದಲ್ಲಿ ನಡೆಯಲಿದ್ದ ಪ್ರಧಾನಿ ವಾಜಪೇಯಿ ಚುನಾವಣಾ ರ್ಯಾಲಿಯ ಸುರಕ್ಷತೆಗೆ ನಿಯುಕ್ತಿಗೊಳಿಸಲಾಗಿದ್ದ ಡೆಪ್ಯುಟಿ ಎಸ್ಪಿ ಯಾಬ್ಬ ಪಾನಮತ್ತನಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವರದಿಯಾಗಿದೆ.

ಪಾನಮತ್ತನಾಗಿದ್ದ ಡಿಎಸ್‌ಪಿ ಪಿ.ಎಲ್‌.ಖಲ್ಕೊ ತನ್ನ ಸಹೊದ್ಯೋಗಿ ಇನ್ನೋರ್ವ ಪೋಲಿಸ್‌ ಅಧಿಕಾರಿ ಜೊತೆ ಮಾತಿನ ಚಕಮಕಿನಡೆದು ಗಾಳಿಗೆ ಗಂಡುಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಕ್ಷಣ ಜಾಗ್ರತಗೊಂಡ ಪೊಲೀಸರು ಅವನನ್ನು ನಿಯಂತ್ರಿಸಿ ಬಂಧನಕ್ಕೊಳಪಡಿಸಿದ್ದಾರೆ. ಆತನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಘಟನೆ ನಡೆದ ಸ್ಥಳ ವಾಜಪೇಯಿ ಉದ್ದೇಶಿಸಿ ಮಾತನಾಡಲಿದ್ದ ರ್ಯಾಲಿಯ ಸ್ಥಳಕ್ಕಿಂತ ದೂರದಲ್ಲಿದೆ. ಪ್ರಧಾನಿ ರ್ಯಾಲಿ ನಡೆಯುವ ಸ್ಥಳಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯಾರೂ ಗಾಯಗೊಂಡ ಘಟನೆ ವರದಿಯಾಗಿಲ್ಲ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+