ಬೊಫೋರ್ಸ್ ಹೆಣ ಕೆದಕುತ್ತಿರುವ ಭಾಜಪ : ದೇಶ್‌ಮುಖ್ ದೂರು
ಬೊಫೋರ್ಸ್ ಹೆಣ ಕೆದಕುತ್ತಿರುವ ಭಾಜಪ : ದೇಶ್‌ಮುಖ್ ದೂರು
ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ.... ಇದಕೆ ಸಂಶಯವಿಲ್ಲ
ಬೋಪೊರ್ಸ್ ಮತ್ತು ರಾಜೀವ್ ಗಾಂಧಿ ಕುಟುಂಬಕ್ಕೆ ಸಂಬಂಧವಿಲ್ಲ. ದೆಹಲಿ ಹೈಕೋರ್ಟ್ ಈ ಕುರಿತು ನಿರ್ಣಯಿಸಿದ್ದರೂ, ಮತ್ತೆ ಬೋಫೋರ್ಸ್ ರಾಡಿ ಎಬ್ಬಿಸುವ ಬಿಜೆಪಿ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲದಂತೆ ವರ್ತಿಸಿದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಶ್‌ಮುಖ್ ದೂರಿದರು.
ಬಿಜೆಪಿಯ ಬಂಗಾರು ಲಕ್ಷ್ಮಣ್- ಜ್ಯೂಡೋ, ತೆಹಲ್ಕಾದಂತ ವಿಷಯವನ್ನು ಚರ್ಚಿಸುತ್ತಿಲ್ಲ. ಅವುಗಳೆಲ್ಲ ಭ್ರಷ್ಟಾಚಾರದ ದೊಡ್ಡ ನಿದರ್ಶನಗಳು. ಆದರೆ ಅವರು ನ್ಯಾಯಾಲಯದಲ್ಲಿ ಚರ್ಚಿತವಾಗಿ, ನಿರ್ಧರಿತವಾಗಿ ಮುಗಿದು ಹೋದ ವಿಷಯವನ್ನು ಕೆಣಕುತ್ತಿದ್ದಾರೆ ಎಂದು ದೇಶ್‌ಮುಖ್ ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ನಿಯತಕಾಲಿಕೆಯಾಂದರ ಸರ್ವೆಗೆ ಪ್ರತಿಕ್ರಿಯಿದ ಅವರು- ಪತ್ರಿಕೆ, ಟಿವಿಗಳು ಅವರದ್ದೇ ಅದ ಸರ್ವೆ ಕೊಡುತ್ತವೆ. ಅದು ‘ಅವೈಜ್ಞಾನಿಕ’ ಎಂದರು. ಅವರು ಹೇಳುವುದೇ ವಾಸ್ತವವಲ್ಲ. ಆದರೆ ಪಕ್ಷವು ಅದನ್ನು ಒಂದು ಮಾರ್ಗದರ್ಶಿಯಾಗಿ , ಪ್ರೇರಣೆಯಾಗಿ ತೆಗೆದುಕೊಂಡು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಚುನಾವಣಾ ನಂತರದ ಹಿಂಬಾಗಿಲಿನ ಒಪ್ಪಂದ ಮಾಡಿಕೊಂಡಿದೆ ಎನ್ನುವ ಟೀಕೆಗಳನ್ನು ತಳ್ಳಿಹಾಕಿ ದೇಶ್‌ಮುಖ್, ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕುರಿತು ಕಾಂಗ್ರೆಸ್‌ಗೆ ಶೇಕಡಾ 100ರಷ್ಟು ವಿಶ್ವಾಸವಿದೆ. ನಮ್ಮ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದು ಖಚಿತವಾಗಿರುವಾಗ ಹೊಂದಾಣಿಕೆ ಏಕೆ? ಎಂದು ಮರು ಪ್ರಶ್ನಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications