ಸಂಸ್ಕೃತ ವಿದ್ವಾನ್‌ ರಂಗನಾಥ ಶರ್ಮರಿಗೆ ‘ದೇರಾಜೆ ಪ್ರಶಸ್ತಿ’ ಪುರಸ್ಕಾರ

ಸಂಸ್ಕೃತ ವಿದ್ವಾನ್‌ ರಂಗನಾಥ ಶರ್ಮರಿಗೆ ‘ದೇರಾಜೆ ಪ್ರಶಸ್ತಿ’ ಪುರಸ್ಕಾರ
ಇಂದಿನವರು ನೀತಿ ಬಿಟ್ಟು ಬೇರೆಲ್ಲ ಬರೆಯ ಬಲ್ಲವರು...

ಬೆಂಗಳೂರು : ಕಲಾವಿದನಿಗೆ ನಿರ್ದಿಷ್ಟ ಪಾತ್ರ ನಿರ್ವಹಿಸಬೇಕೆಂದು ಆತನ ಅಂತರಂಗದ ಮೇಲೆ ಒತ್ತಡ ಹೇರುವುದು ತಪ್ಪು. ಆದರೆ ನಮ್ಮ ರಂಗ ಭೂಮಿಯ ಕಲೆಯ ವಿಚಾರದಲ್ಲಿ ಚೌಕಟ್ಟನ್ನು ಪ್ರೇಕ್ಷಕರು ಮೊದಲಿನಿಂದಲೂ ಹಾಕಿಕೊಂಡು ಬರುತ್ತಿದ್ದಾರೆ. ಇಂತಹ ಚೌಕಟ್ಟಿನೊಳಗೆ ಹೊಸತನವನ್ನು ಸೃಷ್ಟಿಸುವ ಸಾಮರ್ಥ್ಯ ಕಲಾವಿದರಿಗೆ ಇರುವುದರಿಂದಲೇ ಇಲ್ಲಿಯವರೆಗೆ ರಂಗಭೂಮಿ ಜೀವಂತವಾಗಿದೆ ಎಂದು ಕೆರೆಮನೆ ಶಂಭು ಹೆಗಡೆ ಹೇಳಿದ್ದಾರೆ.

ಅವರು ಏಪ್ರಿಲ್‌11ರ ರಂದು ನಡೆದ ‘ದೇರಾಜೆ ಸೀತರಾಮಯ್ಯ ಸಂಸ್ಮರಣೆ ಪ್ರಶಸ್ತಿ ’ಸಮಾರಂಭದಲ್ಲಿ ಮಾತನಾಡುತ್ತಿದ್ದರು. 2004ನೇ ವರ್ಷದ ದೇರಾಜೆ ಪ್ರಶಸ್ತಿಯನ್ನು ಸಂಸ್ಕೃತ ವಿದ್ವಾಂಸ ಎನ್‌.ರಂಗನಾಥ ಶರ್ಮ ಅವರಿಗೆ ಪ್ರದಾನ ಮಾಡಲಾಯಿತು.

ಅಂದಿನ ಕಾಲದ ಕವಿಗಳಿಗೆ ನೀತಿ ಮುಖ್ಯವಾಗಿದ್ದರೆ. ಈಗಿನವರು ಅಂದೊಂದು ಬಿಟ್ಟು ಬೇರೆಲ್ಲ ಬರೆಯುತ್ತಾರೆ ಎಂದು ಪ್ರಶಸ್ತಿ ಸ್ವೀಕರಿಸಿ ರಂಗನಾಥ ಶರ್ಮ ನುಡಿದರು. ಉಮಾಕಾಂತ್‌ ಭಟ್‌ ಕರೆಕೈ ಶರ್ಮರ ಕುರಿತು ಅಭಿನಂದನಾ ಭಾಷಣ ಮಾಡಿದರು.

ಸರಕಾರವು ಜನರನ್ನು ಬಡಿದೆಬ್ಬಿಸುವ, ಅವರಲ್ಲಿ ಸಂಸ್ಕಾರ ತುಂಬುವ ಯಕ್ಷಗಾನಕ್ಕಾಗಿ , ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಆಗ್ರಹಿಸಿದರು.

ಯಕ್ಷಕರ್ಮಿ ದೇರಾಜೆ ಕುರಿತ ಒಡನಾಡಿಗಳ ನೆನಪಿನ ಮಿಡಿತ...

ವಿಚಾರಣೆಯಾಂದಕ್ಕೆ ದೇರಾಜೆ ಸಾಕ್ಷಿಯಾಗಿ ಬಂದಿದ್ದರು. ಅಲ್ಲಿ ಎನ್‌.ಎಸ್‌.ಹೆಗಡೆ ನ್ಯಾಯಮೂರ್ತಿಯಾಗಿದ್ದರು. ಅವರ ಮುಂದೆ ವಿಚಾರಣೆಯಲ್ಲಿ ಪ್ರಸ್ತಾಪಿತವಾದ ‘ನೆರೆಕರೆ’ ಶಬ್ದಕ್ಕೆ ದೇರಾಜೆ ಕೊಟ್ಟ ವ್ಯಾಖ್ಯಾನ- ನೆರೆ ಎಂದರೆ ಪಕ್ಕದ , ಕರೆ ಎಂದರೆ ಕರೆದಾಗ ಕೇಳುವ ಕೊನೆಮನೆ. ಇದರೊಳಗೆ ಬರುವುದೆಲ್ಲ ‘ನೆರೆಕರೆ’. ದೇರಾಜೆ ಅವರ ಮಾತಿಗೆ ನ್ಯಾಯಮೂರ್ತಿ ಸಹ ನಕ್ಕರಂತೆ.

ಇನ್ನೊಂದು ಪ್ರಸಂಗ. ಒಂದು ಬಾರಿ ನಾಯಿ ತನ್ನ ಕಾಲು ನೆಕ್ಕಿತೆಂದು ದೇರಾಜೆ ‘ಥೂ ಮಂಗ ಜಾತಿಯವನೆ ನಡಿಯಾಚೆ’ ಎಂದು ಉಗಿದರು. ಇದನ್ನು ಕೇಳಿದ ಪತ್ನಿ ಅವರನ್ನು ಲೇವಡಿ ಮಾಡಲೆಂದು ‘ಅದು ನಾಯಿ. ಮಂಗನಲ್ಲ , ಸರಿ ನೋಡಿ’ ಎಂದು ನಕ್ಕರು. ಕ್ಷಣಾರ್ಧದಲ್ಲಿ ಹೊಮ್ಮಿದ ಅವರ ಉತ್ತರ ಹೀಗಿತ್ತು ‘ ಲೇ, ನಾಯಿಯನ್ನು ನಾಯಿ ಎಂದರೆ ಬೈದಂತಾಗುವುದೆ?’ .

ಇಂತಹ ಹಲವು ಘಟನೆ, ಸಾಧನೆ, ವ್ಯಕ್ತಿತ್ವದ ವರ್ಣನೆಯನ್ನು ನೆರೆದಿದ್ದ ಆವರ ಅಭಿಮಾನಿಗಳು ನೆನಪಿಸಿದರು. ಸಮಾರಂಭದ ಬಳಿಕ ಖ್ಯಾತ ಕಲಾವಿದರೊಂದಿಗೆ ಕೆರೆಮನೆ ಶಂಭು ಹೆಗಡೆ ತಾಳಮದ್ದಳೆ ನಡೆಸಿ ಕೊಟ್ಟರು.

ಎನ್‌.ಆರ್‌.ಕಾಲೋನಿಯ ಡಿವಿಜಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇರಾಜೆ ಪುತ್ರ ಕೃಷ್ಣಮೂರ್ತಿ, ಪುತ್ರಿ ಇಂದಿರಾ ಜಾನಕಿ, ಒಡನಾಡಿ ಆನೆಕಾರ್‌ ಗಣಪಯ್ಯ, ಉದ್ಯಮಿ ದಯಾನಂದ್‌ ಎಸ್‌ ರಾವ್‌ ಮಾತನಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+