ಯುವ ಬರಹಗಾರರಿಗೆ ಕೆ.ವಿ.ಸುಬ್ಬಣ್ಣ ಸ್ಫೂರ್ತಿ ಸೆಲೆ-ರಾಜೇಂದ್ರ ಚೆನ್ನಿ
ಯುವ ಬರಹಗಾರರಿಗೆ ಕೆ.ವಿ.ಸುಬ್ಬಣ್ಣ ಸ್ಫೂರ್ತಿ ಸೆಲೆ-ರಾಜೇಂದ್ರ ಚೆನ್ನಿ
ಹೆಗ್ಗೋಡಲ್ಲಿ ಸುಬ್ಬಣ್ಣನವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾರೋಗ್ಯದ ಕಾರಣ ಸುಬ್ಬಣ್ಣ ಭಾಗವಹಿಸಿರಲಿಲ್ಲ . ಆ ಕಾರಣ ಸುಬ್ಬಣ್ಣನವರು ಇರುವಲ್ಲಿಗೇ (ಸಾಗರ ತಾಲ್ಲೂಕಿನ ಹೆಗ್ಗೋಡು) ತೆರಳಿದ ಸಾಹಿತ್ಯ ಅಕಾಡೆಮಿಯ ಪದಾಧಿಕಾರಿಗಳು, ಏ.8ರ ಗುರುವಾರ ಪ್ರಶಸ್ತಿ -ಗೌರವ ಸಲ್ಲಿಸಿದರು.
ಸಾಹಿತ್ಯ ಅಕಾಡೆಮಿ ಗೌರವಕ್ಕೆ ಅರ್ಹರಾದ ಎಷ್ಟೋ ಹಿರಿಯರು ನಾಡಿನಲ್ಲಿದ್ದಾರೆ. ಅವರೆಲ್ಲರಿಗೂ ಪ್ರಶಸ್ತಿ ಸಲ್ಲಲಿ ಎಂದು ಗೌರವ ಸ್ವೀಕರಿಸಿದ ಸಂದರ್ಭದಲ್ಲಿ ಸುಬ್ಬಣ್ಣ ನುಡಿದರು. ಈ ಪ್ರಶಸ್ತಿ ತಮ್ಮ ಕೆಲಸಗಳಿಗೆ ಸಂದ ಮನ್ನಣೆ ಎಂದು ಭಾವಿಸುವುದಾಗಿ ಹೇಳಿದ ಅವರು, ಸಮಾಜ ತಮ್ಮ ಸಾಹಿತ್ಯವನ್ನು ಬೆಂಬಲಿಸಿದುದನ್ನು ನೆನಪಿಸಿಕೊಂಡರು.
ಯುವ ಬರಹಗಾರರಿಗೆ ಸುಬ್ಬಣ್ಣ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಅಕಾಡೆಮಿಯ ಸದಸ್ಯ ಹಾಗೂ ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್ ಮಲ್ಲಿಕಾರ್ಜುನ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಿದರು. 10 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ, ಶಾಲು ಹಾಗೂ ಕಂಚಿನ ನಟರಾಜ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications