ಚುನಾವಣೆಯ ಅಪರಾಧ ಹಿನ್ನೆಲೆ ಅಭ್ಯರ್ಥಿಗಳು: ಮುನ್ನಡೆಯಲ್ಲಿ ರಾಜ್ಯ
ಚುನಾವಣೆಯ ಅಪರಾಧ ಹಿನ್ನೆಲೆ ಅಭ್ಯರ್ಥಿಗಳು: ಮುನ್ನಡೆಯಲ್ಲಿ ರಾಜ್ಯ
120 ಕ್ಷೇತ್ರದಲ್ಲಿ 96 ಆಭ್ಯರ್ಥಿಗಳ ಮೇಲೆ 625 ಪ್ರಕರಣ ಗಳು ದಾಖಲು
ಕರ್ನಾಟಕ ಚುನಾವಣಾ ವೀಕ್ಷಕ ಸರ್ಕಾರೇತರ ಸಂಘಟನೆ ಮೊದಲ ಹಂತದ ಚುನಾವಣೆ ನಡೆಯುವ 120 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳ ಸರ್ವೆ ನಡೆಸಿ ಈ ಅಂಕಿ-ಅಂಶ ಒದಗಿಸಿದೆ.
ಸಮೀಕ್ಷೆಯ ಪ್ರಕಾರ, ಕ್ಷೇತ್ರವೊಂದರಲ್ಲಿ 0.96ರಷ್ಟು ಅಪರಾಧಿ ಹಿನ್ನೆಲೆಯ ಆಭ್ಯರ್ಥಿ ಕಣಕ್ಕಿಳಿದಂತೆ ಆಗಿದೆ. ಇದು ಗುಜರಾತ್, ದೆಹಲಿ ಮತ್ತು ರಾಜಸ್ಥಾನದ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ ಎಂದು ಸಂಘಟನೆಯ ಸಂಚಾಲಕ ತ್ರಿಲೋಕ್‌ನಾಥ್ ಶಾಸ್ತ್ರಿ ಹೇಳಿದರು.
ರಾಜ್ಯದ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತು ಜಾತ್ಯತೀತ ಜೆಡಿಯ ಒಟ್ಟು 46ಆಭ್ಯರ್ಥಿಗಳ ಮೇಲೆ ಗಂಭೀರ ಆರೋಪಗಳಿವೆ. ಉಳಿದಂತೆ 50 ಅಪರಾಧಿ ಆಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಐಪಿಸಿ 302- ಕೊಲೆಸಂಬಂಧಿತ , ಐಪಿಸಿ 306- ಆತ್ಮಹತ್ಯೆ ಪ್ರಯತ್ನ, ಐಪಿಸಿ 307- ಕೊಲೆ ಪ್ರಯತ್ನ, ಐಪಿಸಿ 324- ಮಾರಕಾಯುಧದಿಂದ ಹಲ್ಲೆ ಮತ್ತು ಐಪಿಸಿ 144-ಮಾರಕಾಸ್ತ್ರ ಬಳಸಿ ಗಲಭೆಯಂತಹ ಅಪರಾಧಗಳು ದಾಖಲಾಗಿವೆ. ಈ 96 ಆಭ್ಯರ್ಥಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಒಟ್ಟು 625 ಕೇಸುಗಳು ದಾಖಲಾಗಿವೆ.
ರಾಜಕೀಯ ಕ್ಷೇತ್ರವನ್ನು ಹೊರತು ಪಡಿಸಿ ಸಮಾಜದ ಮುಖ್ಯವಾಹಿನಿಯ ವಿವಿಧ ಕ್ಷೇತ್ರದ 22 ಮಂದಿ ಕರ್ನಾಟಕ ಚುನಾವಣಾ ವೀಕ್ಷಕ ಸಂಘಟನೆಯ ಕಾರ್ಯಕರ್ತರು. ಸುಪ್ರಿಮ್ ಕೋರ್ಟ್ ನಿವೃತ್ತ ನ್ಯಾಯಧೀಶ ಎಂ.ಎನ್. ವೆಂಕಟಾಚಲಯ್ಯ, ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಆರ್. ಸತೀಶ್‌ಚಂದ್ರನ್, ಯೋಜನಾ ಆಯೋಗದ ಮಾಜಿ ಸದಸ್ಯ ಎಲ್.ಕೆ. ಜೈನ್, ಸಿಪಿಆರ್ ಎಫ್ ನಿವೃತ್ತ ಮಹಾನಿರ್ದೇಶಕ ಪಿ.ಜಿ. ಹಲರಾಂಕರ್ ಮುಂತಾದವರು ಸಂಘಟನೆಯಲ್ಲಿರುವ ಪ್ರಮುಖರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications