‘ಕರ್ನಾಟಕ ಉದಯ ಯಾತ್ರೆ’ಯಲ್ಲಿ ಸಾಯಿಕುಮಾರ್ ಮಿಂಚಿಂಗು !
‘ಕರ್ನಾಟಕ ಉದಯ ಯಾತ್ರೆ’ಯಲ್ಲಿ ಸಾಯಿಕುಮಾರ್ ಮಿಂಚಿಂಗು !
ಜನವರಿ 26 ಹಾಗೂ ಆಗಸ್ಟ್ 15ಕ್ಕಿಂಥ ಮತದಾನ ನಡೆಯುವ ದಿನ ಮುಖ್ಯ
ಹಾದಿಬದಿಯ ಸಭೆಗಳಲ್ಲಿ ತಮ್ಮ ಕಂಚಿನ ಕಂಠದಲ್ಲಿ ಬಿಜೆಪಿಯ ಸಂದೇಶವನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಸಾಯಿಕುಮಾರ್, ತಮ್ಮ ತಾರಾ ವರ್ಚಸ್ಸಿನಿಂದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದ್ದರು. ಸಾಯಿಕುಮಾರ್ ಅವರನ್ನು ನೋಡಲೆಂದೇ ಆನೇಕಲ್, ರಾಮಮೂರ್ತಿನಗರ, ಹೊಸಕೋಟೆ, ಭಾರತೀನಗರ, ಯಲಹಂಕ ಮುಂತಾದೆಡೆ ಜನರು ಗುಂಪುಗೂಡಿದ್ದರು.
ಮಹಿಳೆಯರು ಹಾಗೂ ಯುವ ಜನತೆಯನ್ನು ಪ್ರಚೋದಿಸುಂತೆ ಮಾತನಾಡಿದ ಸಾಯಿಕುಮಾರ್ ಬಿಜೆಪಿಗೆ ಓಟು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಕ್ಯಾಸೆಟ್‌ನಂತೆ, ಪ್ರತಿಸ್ಥಳದಲ್ಲೂ ತಮ್ಮ ಮಾತುಗಳನ್ನು ಸಾಯಿಕುಮಾರ್ ಪುನರುಚ್ಛರಿಸಿದ್ದು ಅವರ ಭಾಷಣದ ಮತ್ತೊಂದು ವಿಶೇಷ.
ಪವಿತ್ರ ಜನ್ಮಭೂಮಿ, ಹಿಂದುತ್ವ ತತ್ವ ಮತ್ತು ಸಹಿಷ್ಣುತೆ, ಬಿಜೆಪಿಯ ಸಮರ್ಥ ನಾಯಕತ್ವ ಮುಂತಾದ ವಿಷಯಗಳ ಬಗೆಗೆ ಸಾಯಿಕುಮಾರ್ ಭಾವುಕರಾಗಿ ಮಾತನಾಡಿದರು. ಜನವರಿ 26 ಹಾಗೂ ಆಗಸ್ಟ್ 15ಕ್ಕಿಂಥ ಮತದಾನ ನಡೆಯುವ ದಿನ ಅತ್ಯಂತ ಮುಖ್ಯವಾಗಿದ್ದು , ಅಂದು ಎಲ್ಲ ಮತದಾರರೂ ತಪ್ಪದೆ ಮತ ಚಲಾಯಿಸಬೇಕು ಎಂದೂ ಅವರು ಹೇಳಿದರು.
50 ವರ್ಷಗಳಲ್ಲಿ ಕಾಂಗ್ರೆಸ್ ಮಾಡಲಿಕ್ಕೆ ಸಾಧ್ಯವಾಗದ ಸಾಧನೆಯನ್ನು ಪ್ರಧಾನಿ ವಾಜಪೇಯಿ ಐದು ವರ್ಷಗಳಲ್ಲಿ ಮಾಡಿದ್ದಾರೆ. ವಾಜಪೇಯಿ ನಾಯಕತ್ವ ದೇಶಕ್ಕೆ ಮುಂದೆ ಕೂಡ ಅಗತ್ಯ ಎಂದು ಪ್ರತಿಪಾದಿಸಿದ ಸಾಯಿಕುಮಾರ್, ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಟೀಕಿಸಿದರು. ರಾಜ್ಯದಲ್ಲಿ ರೈತ ರೋದಿಸುತ್ತಿದ್ದಾನೆ. ಆದರೆ ರೈತನ ಆಕ್ರಂದನವನ್ನು ನಿರ್ಲಕ್ಷಿಸಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೈಟೆಕ್ ಜಪದಲ್ಲಿ ಮುಳುಗಿದ್ದಾರೆ. ಈ ಕಾರಣದಿಂದಾಗಿಯೇ ಮದ್ದೂರು ಕ್ಷೇತ್ರದಿಂದ ಪಲಾಯನಗೈದು ಚಾಮರಾಜಪೇಟೆಗೆ ಬಂದಿದ್ದಾರೆ ಎಂದು ಸಾಯಿಕುಮಾರ್ ದೂರಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications