‘ಪ್ರೆಸ್’ ಮಹಾತ್ಮೆ ! ಬೆಂಗಳೂರಲ್ಲಿ ಪ್ರೆಸ್ಸಿಗರ ಸಂಖ್ಯೆ- ಸಮಸ್ಯೆ ಹೆಚ್ಚಳ
‘ಪ್ರೆಸ್’ ಮಹಾತ್ಮೆ ! ಬೆಂಗಳೂರಲ್ಲಿ ಪ್ರೆಸ್ಸಿಗರ ಸಂಖ್ಯೆ- ಸಮಸ್ಯೆ ಹೆಚ್ಚಳ
ಲೇಬಲ್ ಅಂಟಿಸಿ ಪೊಲೀಸ್‌ಗೆ ಸಿಕ್ಕಿಬಿದ್ದ ಖದೀಮ
ಬೆಂಗಳೂರು ಮಹಾನಗರ ಪೊಲೀಸ್ ಕಮೀಷನರ್ ಮರಿಸ್ವಾಮಿ- ಪ್ರೆಸ್ ಲೇಬಲ್ ಅಂಟಿಸಿದ ವಾಹನ ಚಾಲಕರಲ್ಲಿ ಸರಿಯಾದ ಗುರುತಿನ ಚೀಟಿ (ಐಡಿ) ಇದೆಯೋ ಇಲ್ಲವೋ ಎನ್ನುವ ತಪಾಸಣೆ ಬಿಗಿಗೊಳಿಸಲು ಹಾಗೂ ಪ್ರೆಸ್ ಬರಹ ದುರುಪಯೋಗಪಡಿಸಿಕೊಳ್ಳುವವರ ಮೇಲೆ ಕಠಿಣ ಕ್ರಮ ಕಾನೂನು ಜರುಗಿಸುವಂತೆ ಇತ್ತೀಚೆಗಷ್ಟೇ ಪೊಲೀಸರಿಗೆ ಸೂಚನೆ ನೀಡಿದ್ದರು. ಹಾಗಿದ್ದರೂ ಪ್ರೆಸ್ಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ . ಪ್ರೆಸ್ ಲೇಬಲ್ ಅಂಟಿಸಿಕೊಂಡು ರಾಜಾರೋಷವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯಾಬ್ಬನನ್ನು ಮಾರ್ಚ್ 8 ರಂದು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಪಾಪೇಗೌಡ ಆಲಿಯಾಸ್ ನಾಗರಾಜ್(36) ಎನ್ನುವ ಬಂಧಿತ ಆರೋಪಿ ಚಾಮರಾಜಪೇಟೆಯ ವಾಸಿ. ನಾಗರಾಜ್ ಸೆಂಟ್ರಲ್ ಪೊಲೀಸರ ಮಿತಿಯಾಳಗೆ ಬರುವ ಜಾಗದಿಂದ ನಕಲು ಕೀ ಬಳಸಿ ಟಾಟಾ ಸುಮೋವನ್ನು ಕಳುವು ಮಾಡಿದ್ದ. ನಂಬರ್ ಪ್ಲೇಟನ್ನು ಬದಲಾಯಿಸಿ ಸುಮೋದ ಗ್ಲಾಸಿನ ಮೇಲೆ ಪ್ರೆಸ್ ಎಂದು ಲೇಬಲ್ ಅಂಟಿಸಿಕೊಂಡು ಬೆಂಗಳೂರು ಮತ್ತು ಕೋಲಾರದ ನಡುವೆ ಟ್ರಿಪ್ ಹೊಡೆಯುತ್ತಿದ್ದ.
ಇದಕ್ಕೂ ಮೊದಲು ಪೀಣ್ಯ, ಶೇಷಾದ್ರಿಪುರಂ ಮತ್ತು ಉಪ್ಪಾರಪೇಟೆ ಪೊಲೀಸರಿಂದ ದ್ವಿಚಕ್ರ ವಾಹನಗಳ ಕಳುವಿಗೆ ಸಂಬಂಧಿಸಿದಂತೆ ನಾಗರಾಜ್ ಬಂಧಿತನಾಗಿದ್ದ. ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ನಾಗರಾಜ್ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಪ್ರೆಸ್ ಮಹಾತ್ಮೆ !
ಪ್ರೆಸ್ ಲೇಬಲ್‌ನಲ್ಲಿ ಅಂಥಾದ್ದೇನಿದೆ?
ಇದೆ!
ಅಪರಾತ್ರಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವಾಗ, ವಾಹನದ ಸರಿಯಾದ ದಾಖಲೆ ಪತ್ರಗಳಿಲ್ಲದಿದ್ದಾಗ, ಲೈಸೆನ್ಸ್ ಇಲ್ಲದಾಗ- ಆಗೆಲ್ಲ ಪ್ರೆಸ್ ಐಡಿ ತೋರಿಸಿದರೆ ಟ್ರಾಫಿಕ್ ಪೊಲೀಸರು ಅವರನ್ನು ಬಿಟ್ಟು ಬಿಡುತ್ತಾರೆ. ಅವರಿಂದಲೂ ನೂರೋ, ಐವತ್ತೋ ಕೇಳಿದರೆ, ಅದನ್ನು ನಾಳೆ ಪೇಪರಿನಲ್ಲಿ ಹಾಕಿ ಬಿಟ್ಟರೆಂಬ ಭಯ ಪೊಲೀಸರಿಗೆ! ಅವರಂದುಕೊಂಡಂತೆ ಏನೂ ನಡೆಯದು ಎನ್ನುವುದು ಬೇರೆ ಮಾತು.
ಪ್ರೆಸ್ ಎಂದು ಲೇಬಲ್ ಅಂಟಿಸಿ ಓಡಾಡುವ ಇಂತಹ ಖದೀಮರೂ, ಲಂಚ ತಿಂದು ತೇಗುವ ಪೊಲೀಸರಿಂದ- ನಿಜವಾಗಿಯೂ ಪ್ರೆಸ್‌ನಲ್ಲಿ ನಿಯತ್ತಿನಿಂದ ದುಡಿದು ಮಧ್ಯರಾತ್ರಿಯಲ್ಲಿ ಆಫೀಸಿನಿಂದ ನೇರ ಮನೆಗೆ ಹೊರಡುವ ಸಭ್ಯರಿಗೆ ಮಾತ್ರ ತೊಂದರೆ ತಪ್ಪಿದ್ದಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications