ಮಿಸೆಸ್ ಪಂಡಿತ್‌ಗೆ ಮಿಸ್ಸಾದ ‘ಮಿಸ್ ಇಂಡಿಯಾ’ ಕಿರೀಟ ಸಯ್ಯಾಲಿಗೆ
ಮಿಸೆಸ್ ಪಂಡಿತ್‌ಗೆ ಮಿಸ್ಸಾದ ‘ಮಿಸ್ ಇಂಡಿಯಾ’ ಕಿರೀಟ ಸಯ್ಯಾಲಿಗೆ
ಮಿಸೆಸ್ಸ್ ಲಕ್ಷ್ಮಿ ತಾನು ‘ಮಿಸ್’ ಅಂದಿದ್ದರು. ಪಾಪ! ಮಿಶ್ರ ಹೊರಬಿದ್ದರು
ಮಿಸ್ ಗೌರವದಿಂದ ತಿರಸ್ಕೃತಗೊಂಡ ಮಿಸೆಸ್ ಪಂಡಿತ್ ಅವರ ಸ್ಥಾನಕ್ಕೆ ಈ ಮುನ್ನ ‘ಫೆಮಿನಾ ಮಿಸ್ ಇಂಡಿಯಾ ಅರ್ಥ್’ ಆಗಿ ಆಯ್ಕೆಯಾಗಿದ್ದ ಸಯ್ಯಾಲಿ ಅವರನ್ನು ಆಯ್ಕೆ ಮಾಡಲಾಗಿದೆ. ಸರಳ ಸಮಾರಂಭದಲ್ಲಿ ಅವರಿಗೆ ಕಿರೀಟ ಧಾರಣೆ ಮಾಡಲಾಯಿತು ಎಂದು ಟೈಮ್ಸ್ ಇನ್ಫೋಟೇಷನ್ ಸಂಸ್ಥೆ ತಿಳಿಸಿದೆ.
ಇದೀಗ ಸಯ್ಯಾಲಿ ಹಿಂದೆ ಪಡೆದಿದ್ದ ‘ಆರ್ಥ್’ ಪದಕ್ಕೆ ಉಳಿದ ಸ್ಪರ್ಧಿಗಳಿಂದ ಆಯ್ಕೆ ನಡೆಸಲಾಗುವುದು ಎಂದು ಟೈಮ್ಸ್ ಹೇಳಿದೆ. ಪಂಡಿತ್ ಏಪ್ರಿಲ್ ಮೊದಲ ವಾರದಲ್ಲಿ ತಮ್ಮ ಕಿರೀಟವನ್ನು ಆಯೋಜಕರಿಗೆ ಹಿಂತಿರುಗಿಸಿದ್ದರು.
ಈ ಹಿಂದೆ ನಡೆದಿದ್ದ ಸ್ಪರ್ಧೆಯಲ್ಲಿ ಮೈಸೂರು ಮೂಲದ ಲಕ್ಷ್ಮಿ ಪಂಡಿತ್ ಆಯ್ಕೆಯಾಗಿದ್ದರು. ಆದರೆ ಅವರಿಗೆ ವಿವಾಹವಾಗಿದ್ದ ವಿಷಯ ಅವರ ಮನೆಯ ಕರಾರು ಪತ್ರದಿಂದ ತಿಳಿದುಬಂದಿತ್ತು. ಈ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರನ್ನು ಅನರ್ಹಗೊಳಿಸಲಾಗಿತ್ತು.
ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಪಂಡಿತ್, ಸಿದ್ದಾರ್ಥ್ ಮಿಶ್ರ ಎಂಬ ವೈದ್ಯ ವೃತ್ತಿಯ ರೂಪದರ್ಶಿಯನ್ನು ವಿವಾಹವಾಗಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಪುರುಷರ ಸೌಂದರ್ಯ ಸ್ಪರ್ಧೆಯಾಂದರಲ್ಲಿ ಭಾಗವಹಿಸಿದ್ದ ಮಿಶ್ರರನ್ನು ಅನೂರ್ಜಿತಗೊಳಿಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications