‘ಗೌಡರೇ ನನ್ನ ರಾಜಕೀಯವಾಗಿ ಕೊಲ್ಲದಿರಿ, ಸ್ತ್ರೀಹತ್ಯೆ ಮಹಾಪಾಪ’

‘ಗೌಡರೇ ನನ್ನ ರಾಜಕೀಯವಾಗಿ ಕೊಲ್ಲದಿರಿ, ಸ್ತ್ರೀಹತ್ಯೆ ಮಹಾಪಾಪ’
ಇದು ಕನಕಪುರ ಕಾಂಗ್ರೆಸ್‌ ಅಭ್ಯರ್ಥಿ ತೇಜಮ್ಮನ ಪ್ರಚಾರದ ಪರಿ!

ಬೆಂಗಳೂರು : ‘ದೇವೆಗೌಡಜೀ ನನ್ನನ್ನು ರಾಜಕೀಯವಾಗಿ ಕೊಲ್ಲಬೇಡಿ. ಇದು ನನಗೆ ಮೊದಲ ಚುನಾವಣೆ. ಸ್ತ್ರೀಹತ್ಯೆ ಮಹಾ ಪಾಪ. ನೀವು ಹಾಸನದಿಂದ ಗೆದ್ದು ಬನ್ನಿ.’ ಎಂದು ಕನಕಪುರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ತೇಜಸ್ವಿನಿ ಶ್ರಿರಮೇಶ್‌ ಹೇಳಿದರು. ಅವರು ಕನಕಪುರ ಕ್ಷೇತ್ರದಲ್ಲಿ ವಿಜಯ ದುಂಧುಬಿ ಯಾತ್ರೆಯಲ್ಲಿ ಮಾತನಾಡುತ್ತಿದ್ದರು.

ನನಗೆ ಅಟಲ್‌, ಅಡ್ವಾಣಿ ಎಲ್ಲವೂ ಕೃಷ್ಣ ಅವರೆ. ಕೃಷ್ಣರಿಗೆ ಜಯ ತಂದು ಕೊಡುವ ಅರ್ಜುನನಾಗಿ ಕಣದಲ್ಲಿ ಹೋರಾಡುತ್ತೇನೆ. ಅವರ ನಾಮಬಲದಿಂದಲೇ ಗೆದ್ದು ಬರುತ್ತೇನೆ. ಅಭ್ಯರ್ಥಿಯನ್ನು ನೋಡಿ ಮತ ಕೊಡಬೇಡಿ. ಕೃಷ್ಣರನ್ನು ನೋಡಿ ಮತ ಕೊಡಿ ಎಂದು ತೇಜಸ್ವಿನಿ ಹೇಳಿದರು.

ಕೃಷ್ಣ ಅವರು ನಾಡು ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಆಲದ ಮರವಿದ್ದಂತೆ. ಅವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರು ಮಣ್ಣಿನ ಮಗನಾ? ಹೆಗಲಿಗೆ ಟವೆಲು ಒದರಿ ಹಾಕಿಕೊಂಡರೆ ಮಣ್ಣಿನ ಮಗನಾಗಿ ಬಿಡುತ್ತಾರ? ಕೃಷ್ಣ ಅವರು ಮಣ್ಣಿನ ಮಕ್ಕಳಲ್ಲವಾ? ಎಂದು ತೇಜಸ್ವಿನಿ ಪ್ರಶ್ನಿಸಿದರು.

ನಾನು ಗೆದ್ದರೆ ನಿಮ್ಮ ಮನೆ ಬಾಗಿಲಿಗೆ ಬಿದ್ದು ಕೆಲಸ ಮಾಡುತ್ತೇನೆ. ನಿಮಗೆ ಕನಕಪುರದ ಮಗಳು ಬೇಕೊ. ಇಲ್ಲ, ಹಾಸನದ ಮಗ ಬೇಕೊ ಎಂದು ನೀವೇ ತೀರ್ಮಾನಿಸಿ ಎಂದರು.

ಈ ಮಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರಲ್ಲಿ ಅಸಾಮಾನ್ಯ ಪ್ರತಿಭೆ ಇದೆ. ಈ ಪ್ರತಿಭೆ ಅರಳಬೇಕಿದೆ ಎಂದು ತೇಜಸ್ವಿನಿಯನ್ನು ಜನತೆಗೆ ಪರಿಚಯಿಸುತ್ತಾ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+