ಚಿತ್ರದುರ್ಗ ಬಳಿ ಅಪಘಾತ ; ಮಂತ್ರಾಲಯದ ಕಿರಿ ಸ್ವಾಮಿಗೆ ಗಾಯ
ಚಿತ್ರದುರ್ಗ ಬಳಿ ಅಪಘಾತ ; ಮಂತ್ರಾಲಯದ ಕಿರಿ ಸ್ವಾಮಿಗೆ ಗಾಯ
ಸುವಿದ್ಯೇಂದ್ರ ತೀರ್ಥರು ಅಪಾಯದಿಂದ ಪಾರು, ಬಲಭುಜಕ್ಕೆ ಸಣ್ಣ ಗಾಯ
ಏಪ್ರಿಲ್ 7ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಕಿರಿಯ ಸ್ವಾಮಿಗಳಾದ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿತ್ರದುರ್ಗದಿಂದ 16 ಕಿ.ಮೀ. ದೂರದ 13ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮಿಗಳು ತಮ್ಮ ವ್ಯಾನಿನಲ್ಲಿ ಬ್ರಹ್ಮಾವರಕ್ಕೆ ಹೋಗುತ್ತಿದ್ದರು. ಲಾರಿಯಾಂದು ನಿಯಂತ್ರಣ ತಪ್ಪಿ, ಸ್ವಾಮಿಗಳಿದ್ದ ವ್ಯಾನಿಗೆ ಬಂದು ಬಡಿಯಿತು. ವ್ಯಾನಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ವಾಮೀಜಿಯವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರ ಬಲ ಭುಜದಲ್ಲಿ ಸ್ವಲ್ಪ ನೋವು ಕಾಣಿಸಿ ಕೊಂಡಿದ್ದು, ಸಣ್ಣ ಪ್ರಮಾಣದ ಫ್ರ್ಯಾಕ್ಚರ್ ಆಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications