ಅಭಿಮಾನಿಗಳ ಆಸೆಯಂತೆ ಹಾಸನದಲ್ಲಿ ದೇವೇಗೌಡರ ನಾಮಪತ್ರ
ಅಭಿಮಾನಿಗಳ ಆಸೆಯಂತೆ ಹಾಸನದಲ್ಲಿ ದೇವೇಗೌಡರ ನಾಮಪತ್ರ
ಬಹಿರಂಗ ಚರ್ಚೆಗೆ ಸೋನಿಯಾ-ವಾಜಪೇಯಿಗೆ ಆಹ್ವಾನ
ಹಾಸನ ಜಿಲ್ಲೆಯ ಜಾತ್ಯತೀತ ಜನತಾದಳದ ನಾಯಕರೊಂದಿಗೆ ಏ.7ರ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ದೇವೇಗೌಡ, ಲೋಕಸಭಾ ಸ್ಪರ್ಧೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಕುಮಾರಸ್ವಾಮಿ ಪುತ್ರ ಎಚ್.ಡಿ.ರೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು. ಯಥಾಪ್ರಕಾರ ಅಭಿಮಾನಿಗಳ ಜೈಕಾರ ಹಾಗೂ ಪಟಾಕಿ ಕಲರವೂ ಇತ್ತು .
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ- ಪ್ರಧಾನಿ ವಾಜಪೇಯಿ ಹಾಗೂ ಪ್ರತಿಪಕ್ಷದ ನಾಯಕಿ ಸೋನಿಯಾಗಾಂಧಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು. ಧೈರ್ಯವಿದ್ದರೆ ಸೋನಿಯಾ ಹಾಗೂ ವಾಜಪೇಯಿ ಬಹಿರಂಗ ಚರ್ಚೆಗೆ ಬರಲಿ. ಈ ಚರ್ಚೆಯಲ್ಲಿ ಸೋತರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ದೇವೇಗೌಡ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications