‘ಬಿಜೆಪಿಯದು ಗಾಂಧಿಯದೇ ವಿಚಾರಧಾರೆ’ : ಅಡ್ವಾಣಿ ಸಂದರ್ಶನ
‘ಬಿಜೆಪಿಯದು ಗಾಂಧಿಯದೇ ವಿಚಾರಧಾರೆ’ : ಅಡ್ವಾಣಿ ಸಂದರ್ಶನ
ನೆಹರು ಮತ್ತು ಅವರ ಸಮಕಾಲೀನ ಕಾಂಗ್ರೆಸ್ ಮುಖಂಡರನ್ನು ಹೊಗಳಿದ ಅಡ್ವಾಣಿ
‘ಹಿಂದುತ್ವ’ ಎಂದರೆ ಒಂದು ಜೀವನ ವಿಧಾನ ಎಂದು ಸುಪ್ರೀಮ್ ಕೋರ್ಟ್ ಎಂದು ತೀರ್ಪಿತ್ತಿದೆ. ಭಾರತೀಯತೆಗೆ ಸಮೀಪವಾಗಿರುವ ಹಿಂದುತ್ವವನ್ನು ನಮ್ಮಗಿಂತ ಹೆಚ್ಚಾಗಿ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಬಳಸುತ್ತಿವೆ. ಬಿಜೆಪಿಯ ಜಾತ್ಯತೀತ ತತ್ವ ಮತ್ತು ದೇಶದ ರಾಷ್ಟ್ರಪಿತನ ತತ್ವವು ಒಂದೇ ಆಗಿತ್ತು. ಧರ್ಮ ಎಂಬುದು ಸತ್ಯ. ಸರಕಾರವು ಎಲ್ಲಾ ಧರ್ಮದ ರಕ್ಷಣೆ ಮಾಡಲು ಜಾತ್ಯತೀತವಾಗಿರಬೇಕು ಎಂಬುದು ಎಂದು ಅಡ್ವಾಣಿ ಹೇಳಿದರು.
ಆದರೆ ದೇಶದ ಮೊದಲ ಪ್ರಧಾನಿ ಜವಹಾರಲಾಲರ ನಿಲುವು ಇದಕ್ಕೆ ವಿಭಿನ್ನವಾಗಿತ್ತು. ಎಲ್ಲಾ ಧರ್ಮಗಳು ಮೂಲತಃ ಅಸತ್ಯವಾಗಿದ್ದು , ಧರ್ಮಗಳ ನಡುವಿನ ಭಿನ್ನಾಭಿಪ್ರಾಯ, ಸಮಸ್ಯೆಗಳನ್ನು ತಪ್ಪಿಸಲು ಸರಕಾರ ಜಾತ್ಯತೀತವಾಗಿರ ಬೇಕು ಎಂದು ನೆಹರು ಪ್ರತಿಪಾದಿಸಿದ್ದರು . ನೆಹರು ಮತ್ತು ವಾಜಪೇಯಿಯಲ್ಲಿ ಸಾಮ್ಯತೆ ಇದೆ. ವಾಜಪೇಯಿ ಆಡಳಿತವನ್ನು ದೇಶದ ಮೊದಲ ಪ್ರಧಾನಿ ನೆಹರುವಿನಷ್ಟೇ ಜನತೆ ಒಪ್ಪಿಕೊಂಡಿದೆ. ಇವರನ್ನು ಹೊರತು ಪಡಿಸಿ ಉಳಿದ ಯಾವ ಪ್ರಧಾನಿಯನ್ನು ಇಷ್ಟೊಂದು ಸಮಯ ಆಡಳಿತ ನಡೆಸಲು ಜನತೆ ಅವಕಾಶ ಕಲ್ಪಿಸಿ ಕೊಟ್ಟಿಲ್ಲ ಎಂದು ಅಡ್ವಾಣಿ ಹೇಳಿದರು.
ಕಾಂಗ್ರೆಸ್ ನಾಯಕರುಗಳಾದ ನೆಹರು, ವಲ್ಲಭ ಭಾಯಿ ಪಟೇಲ್, ಮೌಲಾನಾ ಆಜಾದ್‌ರನ್ನು ಹೊಗಳಿದ ಅವರು ಕೆಲವು ಮಂದಿ ಅಂಬೕಡ್ಕರ್, ಸುಭಾಷ್‌ಚಂದ್ರ ಬೋಸ್ ಮುಂತಾದ ನಾಯಕರುಗಳನ್ನು ಪೂಜಿಸುತ್ತಾರೆ. ಅವರ ಭಾವನೆಗಳಿಗೆ ನಾವು ನೋವು ಮಾಡಬಾರದು ಎಂದು ನುಡಿದರು.
ಶ್ರೇಣಿಕೃತ ಪಕ್ಷವಾಗಿದ್ದ ಬಿಜೆಪಿ ಈಗ ಜನ ಸಮೂಹದ ಪಕ್ಷವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬಿಜೆಪಿ ಯಾವತ್ತೂ ಶ್ರೇಣಿಕೃತ ಜನಸಮೂಹ ಪಕ್ಷ ಎಂದು ಹೇಳಿದರು. ಬಿಜೆಪಿ ಮತ್ತು ಎನ್‌ಡಿಎ ಅಜೆಂಡಾದಲ್ಲಿ ಯಾವುದೇ ಅಂತರವಿಲ್ಲ. ಬಿಜೆಪಿಯು ಎನ್‌ಡಿಎಯ ಪ್ರಮುಖ ಅಂಗ ಪಕ್ಷವಷ್ಟೆ ಎಂದು ಉತ್ತರಿಸಿದರು.
ಬಿಜೆಪಿ ಕೇವಲ ಸರಕಾರ ನಡೆಸುವ ಜವಾಬ್ದಾರಿಯನ್ನು ಮಾತ್ರ ಹೊಂದಿಲ್ಲ. ದೇಶದ ಭವಿಷ್ಯತ್‌ನ ಕುರಿತು ಆಲೋಚಿಸುವುದು. ದೂರಗಾಮಿ ನಿಲುವುಗಳನ್ನು ಬೆಳೆಸುವುದು ಸಹ ಪ್ರಮುಖವಾಗಿದೆ ಎಂದು ತಿಳಿಸಿದರು.
ವೈಯುಕ್ತಿಕವಾಗಿ ಶಾಂತಿಯಿಂದ ಇರುವುದು ನನ್ನ ಜೀವನದ ಶ್ರೇಷ್ಠ ಸಾಧನೆ. ಪತ್ನಿ ಕಮಲಾ ಸಹಕಾರದಿಂದ ನಾನು ನನ್ನ ಕನಸುಗಳನ್ನು ಸಾಕಾರಗೊಳಿಸುತ್ತಿದ್ದೇನೆ ಎಂದು ಹೇಳಿದ ಅವರು, ಪಕ್ಕದಲ್ಲೇ ಕುಳಿತಿದ್ದ ಕಮಲಾ ಅಡ್ವಾಣಿಯತ್ತ ಕುಡಿನೋಟ ಬೀರಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications