‘ವಿಶು’ ಪ್ರಯುಕ್ತ ಅಂಚೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ
‘ವಿಶು’ ಪ್ರಯುಕ್ತ ಅಂಚೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ
150 ರುಪಾಯಿ ಪ್ರಸಾದ ಶುಲ್ಕ ಕಳುಹಿಸಲು ಕೊನೆ ದಿನ ಏ.10
ಕೇರಳ ಅಂಚೆ ವಲಯ ಮತ್ತು ಟ್ರಾವೆಂಕೂರು ದೇವಸ್ಥನ ಮಂಡಳಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಸ್ವಾಮಿಯ ಪ್ರಸಾದ ಯೋಜನೆಯಡಿಯಲ್ಲಿ ಅಂಚೆಯ ಮೂಲಕ ಭಕ್ತಾದಿಗಳ ಕೈ ಸೇರುವಂತೆ ಮಾಡುತ್ತಾ ಬಂದಿದೆ. ಪ್ರಸ್ತುತ ವಿಶು ಹಬ್ಬದ ಪ್ರಯುಕ್ತ ಈ ಅಂಚೆ ಪ್ರಸಾದ ಯೋಜನೆಗೆ ಮತ್ತೆ ಚಾಲನೆ ದೊರೆತಿದೆ.
ಏಪ್ರಿಲ್ 11 ರಿಂದ 18 ರವರೆಗೆ ನಡೆಯುವ ವಿಶು ಹಬ್ಬದ ಅವಧಿಯಲ್ಲಿ ಅಯ್ಯಪ್ಪ ಸ್ವಾಮಿ ಪ್ರಸಾದ ಅಂಚೆ ಮೂಲಕ ಲಭ್ಯ.
ಭಕ್ತಾದಿಗಳು 150 ರುಪಾಯಿಗಳನ್ನು ಮನಿಯಾರ್ಡರ್ ಮೂಲಕ ಕಳುಹಿಸಿ ಪ್ರಸಾದ ಪಡೆಯಬಹುದು.
ಹಣ ಕಳುಹಿಸುವ ವಿಳಾಸ :
Executive Officer,
Travancore Devaswom Board,
Sabarimala,
Pathanamthitta District,
Kerala-689713.
ಹಣವನ್ನು ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 10. ಟೆಲಿಗ್ರಾಫ್ ಮೂಲಕ ಬರುವ ಮನಿಆರ್ಡರ್ ಅಥವಾ ಡಿ.ಡಿ. ರೂಪದ ಪೋಸ್ಟಲ್ ಆರ್ಡರ್‌ಗಳನ್ನು ಪರಿಗಣಿಸಲಾಗುವುದಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications