ಮಣ್ಣಿನ ಮಗ ಎಚ್.ಡಿ.ದೇವೇಗೌಡರ
ಮಣ್ಣಿನ ಮಗ ಎಚ್.ಡಿ.ದೇವೇಗೌಡರ www.jdsecular.com
ಸಿಲಿಕಾನ್ ವ್ಯಾಲಿ ಸಾಧನೆ ತಮ್ಮದೆಂದ ಮಾಜಿ ಪ್ರಧಾನಿ
ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ, ಏ.6ರ ಮಂಗಳವಾರ ಕಂಪ್ಯೂಟರಿನ ಮೌಸ್‌ನ್ನು ಕ್ಲಿಕ್ಕಿಸುವುದರ ಮೂಲಕ www.jdsecular.com ಅಂತರಜಾಲ ತಾಣದ ಬಿಡುಗಡೆ ಮಾಡಿದರು. ಈ ಅಂತರಜಾಲ ತಾಣವು ಪಕ್ಷದ ಸಮಗ್ರ ಮಾಹಿತಿ, ಯೋಜನೆ ಮತ್ತು ತತ್ವಗಳನ್ನು ತೆರೆದಿಟ್ಟಿದೆ. ವೆಬ್‌ಸೈಟ್ ಮೂಲಕ ಚುನಾವಣಾ ಪ್ರಚಾರ ಕಾರ್ಯಗಳಿಗೆ ‘ಹೈ-ಟೆಕ್ ಸ್ಪರ್ಶ’ ನೀಡಲು ಜಾತ್ಯತೀತ ಜನತಾದಳ ಮುಂದಾಗಿದೆ.
ಇದೇ ಸಂದರ್ಭದಲ್ಲಿ , ಕರ್ನಾಟಕದಲ್ಲಿ ಜಾತ್ಯತೀತ ಜನತಾದಳದ ಆಡಳಿತದ ಸಾಧನೆಗಳನ್ನು ಬಿಂಬಿಸುವ ‘ಸಾಧನೆಗಳ ಸವಾಲು’ ಎಂಬ ಶಿರೋನಾಮೆಯನ್ನು ಹೊತ್ತ ಪುಸ್ತಕವನ್ನೂ ದೇವೇಗೌಡ ಬಿಡುಗಡೆ ಮಾಡಿದರು.
ಸಾಧನೆಗಳ ಸವಾಲು ಪುಸ್ತಕದಲ್ಲಿ - ಪಕ್ಷವು ನಡೆದು ಬಂದ ದಾರಿ, ಜಿಲ್ಲೆಗಳ ಪುನರ್ ಸಂಘಟನೆಯಲ್ಲಿ ಪಕ್ಷದ ಪಾತ್ರ, ಗ್ರಾಮೀಣ ಅಭಿವೃದ್ಧಿಗಾಗಿ ಪಕ್ಷ ಕೈಗೊಳ್ಳಲಿರುವ ಹೊಸ ಮಾರ್ಗಗಳ ಬಗೆಗಿನ ನಿಲುವನ್ನು ಬಿಂಬಿಸಲಾಗಿದೆ.
1983 ಮತ್ತು 1994ರ ಅವಧಿಯಲ್ಲಿ ಜನತಾ ಪಕ್ಷ ಮತ್ತು ಜನತಾ ದಳ ಸರ್ಕಾರವು ರಾಜ್ಯದ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿ ಆರ್ಥಿಕ ಸ್ಥಿರತೆ ತಂದಿತ್ತು , ಮತ್ತು ಕಾಂಗ್ರೆಸ್ ಪಕ್ಷದಿಂದಾದ ಸಾಲ ಬಾಕಿಗಳನ್ನು ತೀರಿಸಿತ್ತು. ನೀರಾವರಿ, ವಸತಿ, ಉನ್ನತ ಶಿಕ್ಷಣ ಮತ್ತು ವಿದ್ಯುತ್ ಉತ್ಪಾದನೆಗಾಗಿ 7,809 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತ್ತು ಎಂದು ಸಾಧನೆಗಳ ಸವಾಲು ಪುಸ್ತಕದಲ್ಲಿ ಚಿತ್ರಿಸಲಾಗಿದೆ.
ಜನತಾದಳ ಸರ್ಕಾರದ ಸಾಧನೆಗಳನ್ನು ಸಾರುವ, ಪ್ರಸ್ತುತ ರಾಜ್ಯ ಮತ್ತು ಕೇಂದ್ರದ ಆಡಳಿತದ ಸೋಲನ್ನು ಚಿತ್ರಿಸುವ ಮೂರು ಧ್ವನಿಸುರುಳಿಗಳನ್ನೂ ದೇವೇಗೌಡರು ಬಿಡುಗಡೆ ಮಾಡಿದರು. ಪಕ್ಷಕ್ಕೆ ಹೈಟೆಕ್ ಸ್ಪರ್ಶ ನೀಡಿದ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ- ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ರಾಜ್ಯಕ್ಕೆ ‘ಸಿಲಿಕಾನ್ ಕಣಿವೆ’ ಎಂದು ಹೆಸರು ಬಂದಿರುವ ಯಶಸ್ಸಿನ ಗೌರವ ಕೂಡ ಜನತಾದಳಕ್ಕೇ ಸಲ್ಲಬೇಕು ಎಂದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications