Get Updates
Get notified of breaking news, exclusive insights, and must-see stories!

ಮಲ್ಯ ಪ್ರಣಾಳಿಕೆ : ರೈತರ ಸಾಲ ಮನ್ನಾ , ವಿಮೆ, ಹಳ್ಳಿಗೊಂದು ಶಾಲೆ

ಮಲ್ಯ ಪ್ರಣಾಳಿಕೆ : ರೈತರ ಸಾಲ ಮನ್ನಾ , ವಿಮೆ, ಹಳ್ಳಿಗೊಂದು ಶಾಲೆ
‘ನೇಗಿಲು ಹೊತ್ತ ರೈತ’ ಗುರ್ತಿನ ಜನತಾ ಪಕ್ಷದ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು : ಹಳ್ಳಿಗಳ ಅಭಿವೃದ್ಧಿ ಮತ್ತು ರೈತರ ಪರವಾದ ನಿಲುವು ಹೊಂದಿದ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಉದ್ಯಮಿ, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ವಿಜಯ ಮಲ್ಯ ಏಪ್ರಿಲ್‌ 2ರಂದು ಬಿಡುಗಡೆಗೊಳಿಸಿದರು.

ನಮ್ಮ ದೃಷ್ಟಿಯು ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕವನ್ನು ಅತ್ಯುನ್ನತ ರಾಜ್ಯವನ್ನಾಗಿ ಮಾಡುವುದಾಗಿದೆ. ಎಂದು ಪತ್ರಕರ್ತರನ್ನು ಉದ್ದೇಶಿಸಿ ಹೇಳಿದ ಅವರು ಕಾಂಗೈ ಮತ್ತು ಬಿಜೆಪಿಯನ್ನು ಟೀಕಿಸಲು ಮರೆಯಲಿಲ್ಲ.

ಅಧಿಕಾರಕ್ಕೆ ಬಂದಲ್ಲಿ ಸಾಲ ಮನ್ನಾ, ಮಧ್ಯಮವರ್ತಿಗಳ ನಿರ್ನಾಮ, ಜೀವ ವಿಮೆ, ವಿದ್ಯುತ್‌ ಪೂರೈಕೆಯಂತಹ ಮಹತ್ತರ ಕಾರ್ಯ ನೆರವೇರಿಸಲಾಗುವುದು. ಹೈದರಾಬಾದ್‌- ಕರ್ನಾಟಕದ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಅನುದಾನ ಯೋಜನೆ. ಶಾಲೆ ಮಕ್ಕಳನ್ನು ಕಳುಹಿಸುವ ಪಾಲಕರಿಗೂ ಆಹಾರ ಧಾನ್ಯದಲ್ಲಿ ರಿಯಾಯಿತಿ. ಹಳ್ಳಿಗೊಂದು ಶಾಲೆ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಪ್ರಣಾಳಿಕೆಯು ಕಳೆದ ಐದು ವರ್ಷಗಳ ಕಾಂಗೈ ಅವಧಿಯನ್ನು ‘ಅಹಿತಕರ ಆಡಳಿತ ’ ಎಂದು ಬಿಂಬಿಸಿದೆ. ಈ ಅವಧಿಯಲ್ಲಿ ಸರಕಾರದ ಜವಾಬ್ದಾರಿ ರಹಿತ ಕಾರ್ಯಗಳು, ಹೆಚ್ಚಿದ ರೈತರ ಆತ್ಮಹತ್ಯೆ, ಹಳ್ಳಿಗಳಿಗೆ ಪೂರೈಸಲಾಗದ ಕುಡಿಯುವ ನೀರು, ಕಳಪೆ ಮೂಲಭೂತ ಸೌಕರ್ಯಗಳ ನಿರ್ಮಾಣಗಳ ಕುರಿತು ದಾಳಿ ಮಾಡಿದೆ.

ಕಾಂಗ್ರೆಸ್‌ಗೆ ಅವಕಾಶ ನೀಡಿದ್ದೀರಿ ಅವರು ಆಡಳಿತ ನಡೆಸುವಲ್ಲಿ ಸೋತರು. ಬಿಜೆಪಿಗೆ ಅಧಿಕಾರಕ್ಕೆ ಬರುವ ಅರ್ಹತೆಯಿಲ್ಲ. ವಾಜಪೇಯಿ ವ್ಯಕ್ತಿತ್ವವನ್ನು ಬಿಂಬಿಸಿ ಅವರು ಕರ್ನಾಟಕದ ಜನತೆಯನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ನುಡಿದರು.

ಚುನಾವಣೆಯಲ್ಲಿ ಕಾದು ನೋಡಿ. ನಾವು ಅಚ್ಚರಿಯ ಫಲಿತಾಂಶ ನೀಡಲಿದ್ದೇವೆ. ಅಧಿಕಾರ ನಿರ್ಣಯಿಸುವ ನಿಟ್ಟಿನಲ್ಲಿ ನಮ್ಮ ಪಕ್ಷವು ಪ್ರಧಾನ ಪಾತ್ರವಹಿಸಲಿದೆ. ಮೊದಲ ಸುತ್ತಿನ ಚುನಾವಣೆಯಲ್ಲಿ 105 ಆಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎರಡನೇ ಸುತ್ತಿನ ಚುನಾವಣೆಯಲ್ಲಿ 50 ರಿಂದ 60 ಆಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+