ರಣಭೂಮಿ ಸಿಯಾಚಿನ್‌ಗ್ಲೇಸಿಯರ್‌ಗೆ ರಾಷ್ಟ್ರಪತಿ ಡಾ.ಕಲಾಂ ಭೇಟಿ
ರಣಭೂಮಿ ಸಿಯಾಚಿನ್‌ಗ್ಲೇಸಿಯರ್‌ಗೆ ರಾಷ್ಟ್ರಪತಿ ಡಾ.ಕಲಾಂ ಭೇಟಿ
ಗ್ಲೇಸಿಯರ್‌ನ ಪ್ರಾಕೃತಿಕ ಸಮತೋಲನ ಕಾಪಾಡಲು ಕರೆ
ಅಲ್ಲಿ ಸೈನಿಕರೊಂದಿಗೆ ಮಾತಾಡಿದ ರಾಷ್ಟ್ರಪತಿ ಕಲಾಂ- ಮಾನವ ಇರುವಿಕೆಯಿಂದ ಗ್ಲೇಸಿಯರ್‌ಗೆ ಎದುರಾಗಬಹುದಾದ ಪರಿಸರ ಹಾನಿಯನ್ನು ವಿವರಿಸಿದರು.
ದೇಶದ ರಕ್ಷಣಾ ದೃಷ್ಟಿಯಿಂದ ಗ್ಲೇಸಿಯರನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆಯನ್ನು ವಿವರಿಸಲು ಕಲಾಂ ಮರೆಯಲಿಲ್ಲ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ನಿಮ್ಮ ಶ್ರಮವನ್ನು ಇಡೀ ದೇಶ ಶ್ಲಾಘಿಸುತ್ತದೆ. ಪ್ರಸ್ತುತ ಪ್ರಕೃತಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕಾಗಿ ಪ್ರಾಕೃತಿಕ ಅಭಿಯಾನವು ನಮ್ಮಲ್ಲಿ ನಡೆಯಬೇಕಾಗಿದೆ. ಸಿಯಾಚಿನ್ ಈ ಪ್ರದೇಶದ ಮಾತ್ರವಲ್ಲ ಇಡೀ ದೇಶದ ಒಂದು ಪ್ರಮುಖ ಜಲಮೂಲವಾಗಿದೆ ಎಂದು ಹೇಳಿದರು.
ಸಿಯಾಚಿನ್ ಪ್ರಮುಖ ಆಯಕಟ್ಟಿನ ಯುದ್ಧಭೂಮಿ ಆಗಿರುವುದರಿಂದ ನೀವು ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದೇಶ ನಿದ್ರಿಸುತ್ತಿರುವಾಗ ಎಚ್ಚರವಿದ್ದು ನೀವು ರಕ್ಷಿಸುತ್ತೀರಿ ಎಂದು ಕಲಾಂ ಶ್ಲಾಘಿಸಿದರು. ಸೇನೆಯ ಮೂರು ವಿಭಾಗದಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಆಧುನಿಕ ಸವಲತ್ತುಗಳನ್ನು ಸೇನೆಗೆ ಬಳಸಲಾಗುವುದು ಎಂದು ಹೇಳಿದರು.
ಈ ಪ್ರಮುಖ ಗಡಿ ಪ್ರದೇಶದ ಒಂದೆಡೆ ಇಂದಿರಾ ‘ಕೋಲ್’ಪಾಕ್ ಆಕ್ರಮಿತ ಕಾಶ್ಮೀರ ಗಡಿಯಾದರೆ ‘ಆಕ್ಸೈ’ ಚೀನಾ ಗಡಿಯಾಗಿದೆ. ಇಲ್ಲಿ ನಮ್ಮ ಸಾರ್ವಭೌಮತ್ವ ಉಳಿಸಿಕೊಳ್ಳಲು ಹಲವು ಯುದ್ಧ ಮಾಡಬೇಕಾಯಿತು. ಪ್ರಸ್ತುತ ನೆರೆಯ ದೇಶದೊಂದಿಗೆ ಶಾಂತಿ ರಾಯಭಾರತ್ವ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಲಾಂ 18,000 ಮೀ ಎತ್ತರದ ಸಿಯಾಚಿನ್‌ಗೆ ತೆರಳುವ ಸಂದರ್ಭದಲ್ಲಿ ಅನಾನುಕೂಲಕರ ಹವೆಯಿಂದಾಗಿ ಪ್ರಯಾಣ ವಿಳಂಬವಾಯಿತು. ಅವರ ಜೊತೆ ಭೂಸೇನಾ ದಂಡನಾಯಕ ಜ।ಎನ್.ಸಿ.ವಿಜ್ ಹಾಜರಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications