ವಿಜಯದುಂದುಭಿ-2: ತಾಳಿಕೋಟೆಗೆ ಬಂದರು ಕೃಷ್ಣ, ಜನ ಹುಚ್ಚೆದ್ದರು!
ವಿಜಯದುಂದುಭಿ-2: ತಾಳಿಕೋಟೆಗೆ ಬಂದರು ಕೃಷ್ಣ, ಜನ ಹುಚ್ಚೆದ್ದರು!
ಒಳ್ಳೆಯ ಕೆಲಸಗಳ ಮುಂದುವರಿಸಲು ಮರು ಆಯ್ಕೆ ಮಾಡುವಂತೆ ಕೃಷ್ಣ ಮನವಿ
ಝಲ್ಕಿ, ಇಂಡಿ, ಸಿಂಧಗಿ ಹಾಗೂ ದೇವರಹಿಪ್ಪರಗಿಗಳ ಭೇಟಿಯ ನಂತರ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಾಳಿಕೋಟೆಗೆ ಆಗಮಿಸಿದಾಗ ಅವರಿಗೆ ನೆರೆದಿದ್ದ ಬೃಹತ್ ಜನಸ್ತೋಮದಿಂದ ಉತ್ಸಾಹದ ಸ್ವಾಗತ ದೊರೆಯಿತು. ತಾಳಿಕೋಟೆ ಪಟ್ಟಣ ಮಾತ್ರಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದಲೂ ಸಾವಿರಾರು ಜನ ಆಗಮಿಸಿದ್ದರು. ಮುಖ್ಯಮಂತ್ರಿ ಕೃಷ್ಣರಿಗೆ ಜೈಕಾರದ ಘೋಷಣೆ ಹಾಗೂ ಪಟಾಕಿಯ ಸಂಭ್ರಮಗಳು ಸಾಮಾನ್ಯ ದೃಶ್ಯಗಳಾಗಿದ್ದವು. ಮಹಿಳೆಯರು ಹಾಗೂ ಮಕ್ಕಳು ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು .
ಇದಕ್ಕೂ ಮುನ್ನ ಮುದ್ದೇಬಿಹಾಳಕ್ಕೂ ಮುಖ್ಯಮಂತ್ರಿಗಳು ಭೇಟಿ ನೀಡಿದರು. ತಾಳಿಕೋಟಿ ಪಟ್ಟಣ ಪಂಚಾಯ್ತಿಯ ಸದಸ್ಯರಾದ 72 ವರ್ಷ ವಯಸ್ಸಿನ ಎಚ್.ಕೆ.ಕೆಂಭಾವಿ ಅವರು ಇದೇ ಮೊದಲ ಬಾರಿಗೆ ತಮ್ಮೂರಿಗೆ ಮುಖ್ಯಮಂತ್ರಿಯಾಬ್ಬರು ಭೇಟಿ ನೀಡಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ ಎಂದರು.
ತಮ್ಮ ನಾಲ್ಕೂವರೆ ವರ್ಷಗಳ ವಿವಿಧ ಸಾಧನೆಗಳನ್ನು ಜನರ ಮುಂದಿಟ್ಟ ಕೃಷ್ಣ , ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನರನ್ನು ಕೋರಿದರು. ಆದರೆ, ಬೆಂಗಳೂರು ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಕುರಿತು ಕೃಷ್ಣ ಒಂದು ಮಾತನ್ನೂ ಆಡದಿದ್ದುದು ವಿಶೇಷವಾಗಿತ್ತು . ನೀರಾವರಿ ಯೋಜನೆಗಳು, ಅಕ್ಷರ ದಾಸೋಹ ಹಾಗೂ ಸ್ತ್ರೀಶಕ್ತಿ ಕಾರ್ಯಕ್ರಮಗಳ ಬಗ್ಗೆ ಕೃಷ್ಣ ಹೇಳಿಕೊಂಡರು.
ಒಳ್ಳೆಯ ಕೆಲಸಗಳನ್ನು ಮುಂದುವರಿಸಲು ಅನುಕೂಲವಾಗುವಂತೆ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಕೃಷ್ಣ ಜನರಲ್ಲಿ ಮನವಿ ಮಾಡಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications