ಮಂಡ್ಯದ ಗಂಡು ಅಂಬರೀಷ್ ಹ್ಯಾಟ್ರಿಕ್ ಹೀರೋ ಆಗ್ತಾರಾ?
ಮಂಡ್ಯದ ಗಂಡು ಅಂಬರೀಷ್ ಹ್ಯಾಟ್ರಿಕ್ ಹೀರೋ ಆಗ್ತಾರಾ?
ಸಿನಿ ಆಕರ್ಷಣೆಯಾಗಿ ಬದಲಾದ ಅಂಬರೀಷ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ
ಅಂಬರೀಷ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಖ್ಯಾತ ನಟ ಹಾಗೂ ಅಂಬರೀಷ್ ಗೆಳೆಯ ವಿಷ್ಣುವರ್ಧನ್ , ಪತ್ನಿ ಸುಮಲತಾ ಅಂಬರೀಷ್ ಮತ್ತು ರವಿಚಂದ್ರನ್ ಹಾಜರಿದ್ದರು. ಈ ತಾರಾ ಆಕರ್ಷಣೆಯಿಂದಾಗಿ ಅಂಬರೀಷ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾರೀ ಜನ ಸಮೂಹ ನೆರೆದಿತ್ತು . ಈ ಜಂಗುಳಿಯಿಂದಾಗಿ ಬೆಂಗಳೂರು-ಮೈಸೂರು ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು .
ಅಂಬಿ ಗೆದ್ದಾಯ್ತು : ಗೆಳೆಯ ಅಂಬರೀಷ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದ ವಿಷ್ಣುವರ್ಧನ್ ನೆರೆದಿದ್ದ ಅಪಾರ ಜನಸಮೂಹವನ್ನು ನೋಡಿ ಭಾವುಕರಾಗಿದ್ದರು. ಈ ಬಾರಿ ಅಂಬರೀಷ್ ಗೆಲ್ಲಾರಾ ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಷ್ಣು - ಗೆಲ್ತಾರಾ ಎನ್ನುವ ಪ್ರಶ್ನೆಯೇ ಇಲ್ಲ , ಅಂಬಿ ಗೆದ್ದಾಯ್ತು ನೋಡಿ ಎಂದು ನೆರೆದಿದ್ದ ಸಾವಿರಾರು ಜನರನ್ನು ತೋರಿಸಿದರು.
ಅಂಬರೀಷ್ ಎವರ್‌ಗ್ರೀನ್ ಹೀರೋ ಎಂದು ವಿಷ್ಣು ಬಣ್ಣಿಸಿದರು. ಸತತ ಮೂರನೇ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಗೆಳೆಯ ಅಂಬಿ ಹ್ಯಾಟ್ರಿಕ್ ಹೀರೋ ಆಗ್ತಾರೆ ಎಂದು ವಿಷ್ಣು ಹಾರೈಸಿದರು.
ವಿಷ್ಣುಗೆ ಮುತ್ತು , ನತದೃಷ್ಣ ರವಿಚಂದ್ರನ್ : ನೆರೆದಿದ್ದ ಜನಜಂಗುಳಿಯಿಂದ ತೂರಿಬಂದ ಯುವತಿಯಾಬ್ಬಳು ವಿಷ್ಣುವರ್ಧನ್ ಕೈಕುಲುಕಿ ಕೆನ್ನೆಗೆ ಮುತ್ತಿಟ್ಟ ಅಪರೂಪದ ಪ್ರಸಂಗಕ್ಕೆ ಮಂಡ್ಯದ ಸಾವಿರಾರು ಜನ ಸಾಕ್ಷಿಯಾದರು. ಇದೇ ಯುವತಿ ನಟ ರವಿಚಂದ್ರನ್‌ಗೆ ಮುತ್ತಿಡಲು ಪ್ರಯತ್ನಿಸಿದಳು. ಆದರ ಜನರ ನೂಕಾಟ ಹಾಗೂ ಪೊಲೀಸರ ಮಧ್ಯಪ್ರವೇಶದಿಂದಾಗಿ ರವಿಚಂದ್ರನ್ ಮುತ್ತಿನಿಂದ ವಂಚಿತರಾಗಬೇಕಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications