‘ನಾಗಪ್ಪ ಅಪಹರಣ’ ಸಂಬಂಧ ಸತ್ಯಮಂಗಲಂನಲ್ಲಿ ಇಬ್ಬರ ಬಂಧನ
‘ನಾಗಪ್ಪ ಅಪಹರಣ’ ಸಂಬಂಧ ಸತ್ಯಮಂಗಲಂನಲ್ಲಿ ಇಬ್ಬರ ಬಂಧನ
ಕುಡ್ಡಲೂರಿಗೆ ಸೇರಿದ ಆರೋಪಿಗಳು ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಗಳು
ಈರೋಡು ಜಿಲ್ಲೆಯ ಸತ್ಯಮಂಗಲಂನ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಕೊಳಂಜಿ ಮತ್ತು ಮುತ್ತುಕುಮಾರ್ ಎಂಬುವರನ್ನು ಏ.1ರ ರಾತ್ರಿ ಬಂಧಿಸಲಾಗಿದೆ. ಈ ಇಬ್ಬರು ನಾಗಪ್ಪನವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರು ತಮಿಳುನಾಡು ವಿಮೋಚನಾ ಪಡೆಗೆ ಸೇರಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಕುಡ್ಡಲೂರಿಗೆ ಸೇರಿದ ಈ ಇಬ್ಬರು ಆರೋಪಿಗಳು ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಸಚಿವ ನಾಗಪ್ಪನವರನ್ನು ನರಹಂತಕ ವೀರಪ್ಪನ್ ಆಗಸ್ಟ್ 25, 2002ರಂದು ಅಪಹರಿಸಿದ್ದ . ನಾಗಪ್ಪನವರ್ ವೀರಪ್ಪನ್ ಸೆರೆಯಲ್ಲಿಯೇ 2002ರ ಡಿಸೆಂಬರ್ ತಿಂಗಳಲ್ಲಿ ಸಾವಿಗೀಡಾಗಿದ್ದರು.
(ಪಿಟಿಐ)
ಮುಖಪುಟ / ವೀರಪ್ಪನ್












Click it and Unblock the Notifications