Get Updates
Get notified of breaking news, exclusive insights, and must-see stories!

ಬಡತನಕ್ಕೆ ಕಂಗೆಟ್ಟು ಮಕ್ಕಳ ಕತ್ತುಮುರಿದು ಬೆಟ್ಟದಿಂದ ಹಾರಿದ ತಾಯಿ

ಬಡತನಕ್ಕೆ ಕಂಗೆಟ್ಟು ಮಕ್ಕಳ ಕತ್ತುಮುರಿದು ಬೆಟ್ಟದಿಂದ ಹಾರಿದ ತಾಯಿ
ನೆತ್ತರ ಕಣಿವೆಯಲ್ಲೊಂದು ದಾರುಣ ಪ್ರಸಂಗ

ಜಮ್ಮು : ‘ಭಾರತ ಪ್ರಕಾಶಿಸುತ್ತಿದೆ’, ‘ಹಿತಾನುಭವ’ ಎಂದು ಕೇಂದ್ರ ಸರ್ಕಾರ ಒಂದೆಡೆ ಬೊಬ್ಬೆಯಾಡೆಯುತ್ತಿದ್ದರೆ, ಇನ್ನೊಂದೆಡೆ ಕರಾಳ ಭಾರತದ ದುರ್ಘಟನೆಯಾಂದು ನೆತ್ತರ ಕಣಿವೆಯಿಂದ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆ ಯ ತಾರಾ ಗ್ರಾಮದ ಹೆಂಗಸೊಬ್ಬಳು ಮಾರ್ಚ್‌ 31 ರ ರಾತ್ರಿ ತನ್ನ ಮೂರು ಮಕ್ಕಳನ್ನೂ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಸಾವಿಗೆ ಕಾರಣ ಬಡತನ !

35 ವರ್ಷ ವಯಸ್ಸಿನ ಶರೀಫಾ ಬೇಗಂ ಕಡು ಬಡತನದಿಂದ ಕಂಗೆಟ್ಟು ಈ ಕೃತ್ಯವೆಸಗಿದ್ದಾಳೆ. ಮೊದಲು ತನ್ನ ಒಂಭತ್ತು ವರ್ಷದ ಮಗು ಖಾಲಿಲ್‌ ಅಹಮದ್‌ನ ಕತ್ತು ಮುರಿದಿದ್ದು , ಅದೇ ತೆರನಾಗಿ ಉಳಿದ ಇಬ್ಬರು ಹೆಣ್ಣು ಮಕ್ಕಳಾದ 5 ವರ್ಷದ ತಸ್ಲಿಮಾ ಮತ್ತು 2 ವರ್ಷದ ಮುನ್ನಿಯನ್ನು ದಾರುಣವಾಗಿ ಕೊಂದಿದ್ದಾಳೆ.

ಮೂವರು ಮಕ್ಕಳನ್ನು ಕೊಂದ ನಂತರ ಶರೀಫಾ ಬೆಟ್ಟದ ಮೇಲಿನಿಂದ ಹಾರಿ ಸತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಹೇಳಿ, ಭಾರತ ಪ್ರಕಾಶಿಸುತ್ತಿದೆಯಾ ?

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+