ಕ್ಷೇತ್ರ ಬದಲಾವಣೆ ತಪ್ಪೂ ಅಲ್ಲ , ಕೃಷ್ಣ ಮೊದಲಿಗರೂ ಅಲ್ಲ -ಕೆಪಿಸಿಸಿ
ಕ್ಷೇತ್ರ ಬದಲಾವಣೆ ತಪ್ಪೂ ಅಲ್ಲ , ಕೃಷ್ಣ ಮೊದಲಿಗರೂ ಅಲ್ಲ -ಕೆಪಿಸಿಸಿ
ಬಿ ಫಾರಂ ದೊರೆಯದವರು ನಾಮಪತ್ರ ವಾಪಸ್ಸು ಪಡೆಯಲು ಸೂಚನೆ
ಮುಖ್ಯಮಂತ್ರಿ ಕ್ಷೇತ್ರ ಬದಲಾವಣೆ ಮಾಡುವುದರಲ್ಲಿ ವಿಶೇಷವೇನಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ರಾಮಕೃಷ್ಣಹೆಗಡೆ ಮತ್ತು ದೇವೇಗೌಡ ಕ್ಷೇತ್ರ ಬದಲಾಯಿಸಿದ್ದರು. ಪ್ರಸ್ತುತ, ಕೃಷ್ಣ ಅವರ ಕ್ಷೇತ್ರ ಬದಲಾವಣೆಯ ವಿಷಯ ಹೈಕಮಾಂಡ್ ಮತ್ತು ರಾಜ್ಯ ಘಟಕದ ನಿರ್ಧಾರವಾಗಿದೆ. ಎಂದು ಪಕ್ಷದ ವಕ್ತಾರ ವಿ.ಸುದರ್ಶನ್ ಗುರುವಾರ ತಿಳಿಸಿದರು.
ಕ್ಷೇತ್ರ ಬದಲಾವಣೆ ಕುರಿತು ಪ್ರಚಾರ ಇಷ್ಟಪಡದ ಕಾರಣ ಕೃಷ್ಣ ಅವರು ತಮ್ಮ ಕ್ಷೇತ್ರ ಯಾವುದು ಎಂದು ಬಹಿರಂಗಪಡಿಸಿರಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಹೇಳಿದರು.
ಬಿ ಫಾರಂ ದೊರೆಯದೆ ನಾಮಪತ್ರ ಸಲ್ಲಿಸಿರುವವರು ತಕ್ಷಣ ನಾಮಪತ್ರ ಹಿಂತೆಗೆಯಬೇಕು. ಇಲ್ಲವಾದ ಪಕ್ಷದಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು. ಗೆಲ್ಲುವ ಸಾಮರ್ಥ್ಯ, ಸಮಾಜಸೇವೆ ಮತ್ತು ಸಾಮಾಜಿಕ ನ್ಯಾಯವನ್ನು ಪರಿಗಣಿಸಿ ಟಿಕೆಟ್ ನೀಡಲಾಗಿದೆ ಎಂದು ಸಚಿವೆ ರಾಣಿ ಸತೀಶ್ ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications