Get Updates
Get notified of breaking news, exclusive insights, and must-see stories!

ಪಕ್ಷಾಂತರ ಭೀತಿ! ಪ್ರಕಟವಾಗದ ಪ್ರಮುಖ ಪಕ್ಷಗಳ ಅಭ್ಯರ್ಥಿ ಪಟ್ಟಿ

ಪಕ್ಷಾಂತರ ಭೀತಿ! ಪ್ರಕಟವಾಗದ ಪ್ರಮುಖ ಪಕ್ಷಗಳ ಅಭ್ಯರ್ಥಿ ಪಟ್ಟಿ
ರಾಜ್ಯದ ಪ್ರಮುಖ ಪಕ್ಷಗಳ ಟಿಕೆಟ್‌ ಹಂಚಿಕೆಯಲ್ಲಿ ಮುಂದುವರಿದ ಭಿನ್ನಾಭಿಪ್ರಾಯ

ಬೆಂಗಳೂರು : ಪಕ್ಷಾಂತರ ಭೀತಿಯಿಂದ ಬಳಲುತ್ತಿರುವ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜಾತ್ಯತೀತ ಜನತಾದಳ ತಮ್ಮ ಚುನಾವಣಾ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆಯನ್ನು ಮುಂದೂಡಿದೆ.

ಕಾಂಗೈ ಆಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದರೂ ರಾಜ್ಯ ಮುಖಂಡರುಗಳ ಒತ್ತಾಯದ ಮೇರೆಗೆ ಹೈಕಮಾಂಡ್‌ ಪ್ರಕಟಿಸಿಲ್ಲ. ಈಗಾಗಲೇ ಪ್ರಕಟಿಸಿದ ಕ್ಷೇತ್ರಗಳಲ್ಲಿ ಟಿಕೆಟ್‌ಸಿಗದ ಮುಖಂಡರು ಪಕ್ಷತೊರೆದಿದ್ದು, ಕೆಲವರು ಬಂಡಾಯ ಎದ್ದಿರುವುದೆ ಇದಕ್ಕೆ ಕಾರಣ ಎಂದು ನಂಬಲಾಗಿದೆ.

ಜಾತ್ಯತೀತ ಜನತಾ ದಳದಲ್ಲಿ ಆಭ್ಯರ್ಥಿಗಳ ಪಟ್ಟಿಯನ್ನು ಔಪಚಾರಿಕವಾಗಿ ಪ್ರಕಟಿಸದೆ ಸುಮಾರು 70 ಕ್ಷೇತ್ರಗಳಲ್ಲಿ ‘ಬಿ’ ಫಾರ್ಮ್‌ ನೀಡಲಾಗಿದೆ. ಅಂ ತಿಮ ಪ್ರಕಟಣೆಯನ್ನು ಕೊನೆಗಳಿಗೆಯಲ್ಲಿ ಮಾಡುವ ಸಾಧ್ಯತೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ತಳ್ಳಿಹಾಕಿಲ್ಲ. ಇದಲ್ಲದೆ ಕಾಂಗೈ ಮತ್ತು ಬಿಜೆಪಿ ಪಟ್ಟಿ ಪ್ರಕಟವಾದೊಡನೆ ಕೆಲ ಮುಖಂಡರು ಪಕ್ಷಾಂತರಗೊಳ್ಳುವ ಸಾಧ್ಯತೆಯನ್ನು ಜೆಡಿಎಸ್‌ ನಿರೀಕ್ಷಿಸುತ್ತಿದೆ. ಕಾಂಗೈ ಮತ್ತು ಬಿಜೆಪಿಯ ಮೊದಲ ಪಟ್ಟಿ ಪ್ರಕಟವಾದಾಗ ಕೆಲವು ಮುಖಂಡರು ಪಕ್ಷಾಂತರಗೊಂಡಿದ್ದರು.

ಮೊದಲ ಪಟ್ಟಿ ಪ್ರಕಟಿಸಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ ಮುಂತಾದೆಡೆ ಬಂಡಾಯ ಎದುರಿಸುತ್ತಿರುವ ಬಿಜೆಪಿ ಅಂತಿಮ ಪಟ್ಟಿಯನ್ನು ಪ್ರಕಟಿಸಲು ವಿಳಂಬ ಮಾಡಿದೆ. ಪಕ್ಷದೊಳಗೆ ತೀವ್ರವಾದ ಅಪಸ್ವರಗಳು ಈಗಾಗಲೇ ಕೇಳಿಬರುತ್ತಿದೆ. ರಾಜ್ಯ ನಾಯಕತ್ವದ ವಿರುದ್ದವೇ ಹಲವೆಡೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

ಮೂರು ಕಡೆಗಳಲ್ಲಿಯೂ ಟಿಕೆಟ್‌ ಸಿಗದ ಕೆಲವು ಮುಖಂಡರುಗಳು ಕನ್ನಡನಾಡು ಪಾರ್ಟಿ, ಜನತಾ ಪಕ್ಷ ಮುಂತಾದ ಪಕ್ಷಗಳಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಅಂತಿಮವಾಗಿ ಪ್ರಮುಖ ರಾಜಕೀಯ ಪಕ್ಷದ ಟಿಕೆಟ್‌ ಸಿಗದಿದ್ದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತವನ್ನು ಈಗಾಗಲೇ ಕೆಲವರು ವ್ಯಕ್ತಪಡಿಸಿದ್ದಾರೆ.

(ಇನ್ಪೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+