ಸಾತನೂರಿನಿಂದ ಎಸ್ಸೆಂ.ಕೃಷ್ಣ ಸ್ಪರ್ಧೆ ; ಬುಧವಾರ ನಾಮಪತ್ರ ಸಲ್ಲಿಕೆ
ಸಾತನೂರಿನಿಂದ ಎಸ್ಸೆಂ.ಕೃಷ್ಣ ಸ್ಪರ್ಧೆ ; ಬುಧವಾರ ನಾಮಪತ್ರ ಸಲ್ಲಿಕೆ
ಡಿ.ಕೆ.ಶಿವಕುಮಾರ್ ಕನಕಪುರ ಲೋಕಸಭಾ ಕ್ಷೇತ್ರದ ಕಾಂಗೈ ಹುರಿಯಾಳು
ಕೃಷ್ಣ ಅವರು ಮಾ.31ರ ಬುಧವಾರ ನಾಮಪತ್ರ ಸಲ್ಲಿಸುವರು. ಈ ಸಂದರ್ಭದಲ್ಲಿ ತಮ್ಮೊಂದಿಗೆ ಇರುವಂತೆ ಕೃಷ್ಣ ಅವರು ತಿಳಿಸಿರುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಎಸ್ಸೆಂ ಕೃಷ್ಣ 1999ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಕೃಷ್ಣ ಅವರು ಕ್ಷೇತ್ರ ಬದಲಿಸುವ ಕುರಿತು ವಿವಿಧ ವದಂತಿಗಳು ಕೇಳಿಬರುತ್ತಿದ್ದವು. ತುಮಕೂರು ಜಿಲ್ಲೆಯ ಹುಲಿಯೂರುದುರ್ಗ, ಸಾತನೂರು ಅಥವಾ ಬೆಂಗಳೂರಿನ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಕೃಷ್ಣ ಸ್ಪರ್ಧಿಸುವ ಸಾಧ್ಯತೆಗಳಿದ್ದವು. ಪ್ರಸ್ತುತ ಕೃಷ್ಣ ಅವರು ಸಾತನೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ.
ನನ್ನನ್ನು ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಆದೇಶಿಸಿದೆ. ದೇವೇಗೌಡರು ಕನಕಪುರದಿಂದ ಸ್ಪರ್ಧಿಸಿದರೆ ತೀವ್ರ ಸ್ಪರ್ಧೆ ಒಡ್ಡುವುದಾಗಿ ಶಿವಕುಮಾರ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications