ನೀರಿಗಾಗಿ ಹಾಹಾಕಾರ ; ಮಾ.31ರಂದು ರಬಕವಿ-ಬನಹಟ್ಟಿ ಬಂದ್
ನೀರಿಗಾಗಿ ಹಾಹಾಕಾರ ; ಮಾ.31ರಂದು ರಬಕವಿ-ಬನಹಟ್ಟಿ ಬಂದ್
ಸ್ಥಳೀಯ ಸಮಸ್ಯೆಗಳ ಮರೆತು ಚುನಾವಣಾ ರಾಜಕಾರಣದಲ್ಲಿ ಮುಳುಗಿದ ನಾಯಕರು
ಸ್ಥಳೀಯ ಮುನಿಸಿಪಾಲಿಟಿ ನಾಯಕರು ಮುಂಬರುವ ಸಾರ್ವಜನಿಕ ಚುನಾವಣೆಗಳ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತೆಯೂ ಇಲ್ಲ , ಚಿಂತನೆಯೂ ಇಲ್ಲ . ಈ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಮಾ.31ರಂದು ರಬಕವಿ- ಬನಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಬಕವಿ-ಬನಹಟ್ಟಿ ನಾಗರಿಕರ ವೇದಿಕೆಯ ಅಧ್ಯಕ್ಷ ವೀರಣ್ಣ ಕೊಪ್ಪದ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಬಕವಿ ಹಾಗೂ ಬನಹಟ್ಟಿ ಅವಳಿ ಪಟ್ಟಣಗಳ ಜನತೆ ಪ್ರತಿದಿನವೂ ನೀರಿಗಾಗಿ ಹೋರಾಟವನ್ನೇ ನಡೆಸುತ್ತಿದ್ದಾರೆ. ದಿನದ ಬಹುಭಾಗವನ್ನು ನೀರನ್ನು ಸಂಗ್ರಹಿಸುವಲ್ಲೇ ಜನರು ಕಳೆಯುತ್ತಿದ್ದಾರೆ. ಪಟ್ಟಣದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು , ಅವರಿಗೆ ಬಟ್ಟೆಗಳನ್ನು ತೊಳೆಯಲು ಹಾಗೂ ಡೈಯಿಂಗ್‌ಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗಿದೆ. ಆದರೆ ನೀರಿನ ಕೊರತೆಯಿಂದ ನೇಕಾರರ ಉದ್ಯಮ ಕೂಡ ತೊಂದರೆ ಎದುರಿಸುತ್ತಿದೆ ಎಂದು ಕೊಪ್ಪದ್ ಹೇಳಿದ್ದಾರೆ.
ಒಂದು ದಿನದ ಬಂದ್ ಕೇವಲ ಸಾಂಕೇತಿಕ ಪ್ರತಿಭಟನೆ ಮಾತ್ರ. ಈ ಬಂದ್‌ಗೆ ಸ್ಥಳೀಯ ನಾಯಕರು ಗಮನ ಕೊಡದಿದ್ದಲ್ಲಿ , ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪದ್ ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications