‘ಪಕ್ಷ ’ ಕಾಲದ ವಿರಸ ಅಂತ್ಯ ; ಕುಮಾರ್ ಬಂಗಾರಪ್ಪ ಮರಳಿ ‘ಕೈ’ ವಶ
‘ಪಕ್ಷ ’ ಕಾಲದ ವಿರಸ ಅಂತ್ಯ ; ಕುಮಾರ್ ಬಂಗಾರಪ್ಪ ಮರಳಿ ‘ಕೈ’ ವಶ
ಅಪ್ಪನನ್ನೂ ಮರಳಿ ಪಕ್ಷಕ್ಕೆ ಕರೆತರಲು ಪ್ರಯತ್ನಿಸುವೆ.....
ಬಿಜೆಪಿಯಲ್ಲಿ ಉಸಿರು ಕಟ್ಟಿಸುವ ವಾತಾವರಣವಿದೆ. ಆ ಕಾರಣದಿಂದ ಕಾಂಗ್ರೆಸ್‌ಗೆ ಮರಳಿ ಬಂದಿದ್ದೇನೆ. ಅಪ್ಪ ಬಂಗಾರಪ್ಪನವರನ್ನು ಕೂಡ ಕಾಂಗ್ರೆಸ್‌ಗೆ ಮರಳಿ ಕರೆತರಲು ಪ್ರಯತ್ನಿಸುತ್ತೇನೆ ಎಂದು ಶುಕ್ರವಾರ (ಮಾ.26) ನವದೆಹಲಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ಹೇಳಿದರು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಬಂಗಾರಪ್ಪನವರ ವಿರುದ್ಧ ಪ್ರಚಾರ ಮಾಡುವಿರಾ ಎನ್ನುವ ಸುದ್ದಿಗಾರರಿಗೆ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಕುಮಾರ್ ಬಂಗಾರಪ್ಪ - ಪಕ್ಷದ ಆದೇಶದಂತೆ ನಡೆದುಕೊಳ್ಳುವುದಾಗಿ ಹೇಳಿದರು. ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯವನ್ನು ಕೂಡಾ ಪಕ್ಷವೇ ನಿರ್ಧರಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರಿಸಿಕೊಂಡಿರುವ ಸೋನಿಯಾ ಗಾಂಧಿ ಹಾಗೂ ಮುಖ್ಯಮಂತ್ರಿ ಕೃಷ್ಣರಿಗೆ ಕುಮಾರ್ ಬಂಗಾರಪ್ಪ ಧನ್ಯವಾದ ಅರ್ಪಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications