ಕೈ ಹಿಡಿಯುವವ ಒಳ್ಳೆಯವನಾಗಿರಲಿ ! ಕೇರಳದಲ್ಲಿ ಕಾಮಣ್ಣನ ಪೂಜೆ

ಕೈ ಹಿಡಿಯುವವ ಒಳ್ಳೆಯವನಾಗಿರಲಿ ! ಕೇರಳದಲ್ಲಿ ಕಾಮಣ್ಣನ ಪೂಜೆ
ಮಾರ್ಚ್‌ 25ರಿಂದ 9 ದಿನಗಳ ಕಾಲ ಕನ್ಯೆಯರಿಂದ ಮನ್ಮಥನ ಪೂಜೆ

ಕಣ್ಣೂರು : ಕೇರಳದ ಉತ್ತರ ಮಲಬಾರ್‌ ಪ್ರದೇಶಗಳಲ್ಲೀಗ ಮನ್ಮಥನಿಗೆ ಅಗ್ರಪೂಜೆ !

ಮಾರ್ಚ್‌ 25ರಿಂದ ಪ್ರಾರಂಭವಾಗಿರುವ ಪೂರೋತ್ಸವಂ ಎಂಬ ಒಂಭತ್ತು ದಿನಗಳ ಈ ಹಬ್ಬದಲ್ಲಿ ಕಾಮದೇವ ಮದನನಿಗೆ ಪೂಜೆ ಪುರಸ್ಕಾರ. ಈ ನವದಿನಗಳ ಆಚರಣೆ ನವ ಯುವತಿಯರಿಗೆ ಸಡಗರದ ಹಬ್ಬ. ಈ ಹಬ್ಬವನ್ನಾಚರಿಸುವ ಮೂಲಕ ಜನರು ಕಾಮದೇವನನ್ನು ಆಹ್ವಾನಿಸುತ್ತಾರೆ. ಬಹುತೇಕ ದೇವಿ ಮಂದಿರಗಳಲ್ಲಿ ಹುಡುಗಿಯರು ಪೂರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಆಚರಣೆ ಮಲಬಾರ್‌ ಪ್ರದೇಶಗಳಲ್ಲಿನ ಒಂಭತ್ತು ದಿನಗಳ ಆಕರ್ಷಣೆಯ ಕೇಂದ್ರವಾಗಿದೆ.

ಪ್ರತಿವರ್ಷವೂ ನಡೆಯುವ ಈ ಹಬ್ಬವು ಮಲಯಾಳಂ ಪಂಚಾಗದ ಪ್ರಕಾರ ಕಾರ್ತಿಕ ನಕ್ಷತ್ರದಿಂದ ಪೂರಂ ನಕ್ಷತ್ರದವರೆಗೆ ನಡೆಯುತ್ತದೆ. ಪುರಾಣದಲ್ಲಿ ದೇವಕನ್ಯೆಯರು ಮದನನ ಪುನರ್ಜನ್ಮ ಕೋರಿ ಶಿವನನ್ನು ಪ್ರಾರ್ಥಿಸಿದಂತೆ ಎಲ್ಲ ಹೆಂಗಳೆಯರೂ ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆಯನ್ನು ಅವರು ಮೀನಂ ಎಂದು ಕರೆಯುತ್ತಾರೆ.

ಹಬ್ಬದ ಸಮಯದಲ್ಲಿ ಹೆಣ್ಣು ಮಕ್ಕಳು ತಂತಮ್ಮ ಮನೆಯನ್ನು ತಳಿರು-ತೋರಣ ಹೂಗಳಿಂದ ಅಲಂಕರಿಸಿ ಕಾವದೇವನ ಕೃಪೆ ಕೋರುತ್ತಾ ತಮಗೆ ಒಳ್ಳೆಯ ವರ(ಗಂಡ) ಸಿಗಲಿ ಎಂದು ವರ ಕೋರುತ್ತಾರೆ. ಇಂತಹ ಹಲವಾರು ವಿಶಿಷ್ಟವಾದ ಆಚರಣೆಗಳಿಂದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಪೂರಕ್ಕಲಿಯಂತಹ ವಿಶೇಷ ಸಾಂಸ್ಕೃತಿಕ ನೆಲೆಗಟ್ಟಿನ ಆಚರಣೆಗಳಿಗೆ ಗುರುತಿಸಲ್ಪಡುತ್ತವೆ.

ಭಾರತೀಯ ಆಚರಣೆಗಳು ಎಷ್ಟೊಂದು ವೈವಿಧ್ಯಮಯವಾಗಿರುತ್ತವೆ, ಅಲ್ಲವೇ ? ಆ ಕಾರಣದಿಂದಲೇ ಭಾರತ ಸಾಂಸ್ಕೃತಿಕವಾಗಿ ಸಮೃದ್ಧಿಯ ದೇಶ.

(ಏಜನ್ಸೀಸ್‌)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+