ಧರ್ಮಸ್ಥಳ ವೀರೇಂದ್ರಹೆಗ್ಗಡೆಗೆ ತುಳು ಸಾಹಿತ್ಯಅಕಾಡೆಮಿ ಫೆಲೋಶಿಪ್
ಧರ್ಮಸ್ಥಳ ವೀರೇಂದ್ರಹೆಗ್ಗಡೆಗೆ ತುಳು ಸಾಹಿತ್ಯಅಕಾಡೆಮಿ ಫೆಲೋಶಿಪ್
ನಾವಡ, ಅನಂತರಾಮ ಬಂಗಾಡಿ, ಪ್ರಭು, ವಾಮನ, ಬಾಬು ಪರವಗೆ ಪ್ರಶಸ್ತಿ
ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ವೀರೇಂದ್ರ ಹೆಗ್ಗಡೆಯವರು ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ 2003ನೇ ಸಾಲಿನ ಗೌರವ ಫೆಲೋಷಿಪ್‌ಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ವಾಮನ ನಂದಾವರ ಗುರುವಾರ (ಮಾ.25) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಕೆಡೆಮಿಯ ಫೆಲೋಷಿಪ್- ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ 2003ನೇ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿಗಳಿಗೆ ಐವರನ್ನು ಗುರುತಿಸಲಾಗಿದೆ. ಅವರುಗಳೆಂದರೆ :
ಎಂ.ಎಂ.ಪ್ರಭು (ಸಂಶೋಧನೆ), ಪ್ರೊ.ಎ.ವಿ.ನಾವಡ (ಶಾಸನ), ಕೆ.ಅನಂತರಾಮ ಬಂಗಾಡಿ (ಸಾಹಿತ್ಯ ಮತ್ತು ಗಾಯನ), ಕೆ.ಬಿ.ವಾಮನ (ರಂಗಭೂಮಿ ಮತ್ತು ಸಿನಿಮಾ) ಹಾಗೂ ಬಾಬು ಪರವ (ಜಾನಪದ).
ಪ್ರಶಸ್ತಿಗಳು ತಲಾ 10 ಸಾವಿರ ರುಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ಒಳಗೊಂಡಿವೆ. ಜೂನ್ 2ರಂದು ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಾಮನ ನಂದಾವರ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications