ಶಾಮಸುಂದರ್‌ಗೆ ಆರ್ಯಭಟ ಪ್ರಶಸ್ತಿ
ಶಾಮಸುಂದರ್‌ಗೆ ಆರ್ಯಭಟ ಪ್ರಶಸ್ತಿ
ಏಪ್ರಿಲ್ 15ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು : ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳಿಗೆ ಜೀವ ತುಂಬುತ್ತಿರುವ http://www.thatskannada.com ಸಂಪಾದಕ ಎಸ್.ಕೆ.ಶಾಮಸುಂದರ್ 2003ನೇ ಸಾಲಿನ ಆರ್ಯಭಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ಸಲ್ಲಿಸಿರುವ ಪ್ರತಿಭಾನ್ವಿತರನ್ನು ಆರ್ಯಭಟ ಸಾಂಸ್ಕೃತಿಕ ಸಂಸ್ಥೆ 2003ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು , ಎಸ್ಕೆ.ಶಾಮಸುಂದರ್ ‘ಡಾಟ್‌ಕಾಂ’ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ವಿಜೇತರಲ್ಲಿ ಡಾ.ಎಂ.ಎಸ್.ತಿಮ್ಮಪ್ಪ , ಟಿ.ಮಹಬಲೇಶ್ವರ ಭಟ್ಟ, ಎಚ್.ಜಿ.ಸೋಮಶೇಖರ ರಾವ್, ಯಶವಂತ ಸರದೇಶಪಾಂಡೆ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಜಯಶೀಲರಾವ್, ನಿತಿನ್ ಶಾ, ಪ್ರಕಾಶ್ ಕಂಬತ್ತಳ್ಳಿ, ಸುಧಾ ಬರಗೂರು, ಮಾರ್ಕಂಡಪುರಂ ಶ್ರೀನಿವಾಸ್, ಡಾ.ಜಾನ್ ಎಬೆಜನರ್, ಕೋಟೇಶ್ವರ ಸೂರ್ಯನಾರಾಯಣರಾವ್ ಪ್ರಮುಖರು.
ಏಪ್ರಿಲ್ 15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications