ಬಿಜೆಪಿ ನಮ್ಮ ಕುಟುಂಬವನ್ನು ನಾಶ ಮಾಡಿತು -ಕುಮಾರ್ ಬಂಗಾರಪ್ಪ
ಬಿಜೆಪಿ ನಮ್ಮ ಕುಟುಂಬವನ್ನು ನಾಶ ಮಾಡಿತು -ಕುಮಾರ್ ಬಂಗಾರಪ್ಪ
ಅಪ್ಪನಿಂದ ಪರಿತ್ಯಕ್ತ ಮಗ ಬಿಜೆಪಿ ತೊರೆಯಲು ನಿರ್ಧಾರ
ಪಿಟಿಐ ಪ್ರತಿನಿಧಿಯಾಂದಿಗೆ ಮಾ.25ರ ಗುರುವಾರ ಮಾತನಾಡಿದ ಕುಮಾರ್ ಬಂಗಾರಪ್ಪ - ಸೊರಬ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿರುವ ತಮ್ಮ ತಂದೆ ಬಂಗಾರಪ್ಪನವರ ನಡವಳಿಕೆ ತಮಗೆ ನೋವುಂಟು ಮಾಡಿದೆ ಎಂದರು. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದ ಕುಮಾರ್ ಬಂಗಾರಪ್ಪ- ಬಿಜೆಪಿ ತಮ್ಮ ಕುಟುಂಬವನ್ನು ಒಡೆಯಿತು, ದೇಶವನ್ನೂ ನಾಶ ಮಾಡಲು ಹೊರಟಿದೆ ಎಂದು ಆಪಾದಿಸಿದರು.
ಇನ್ನು ನಾಲ್ಕೈದು ದಿನಗಳಲ್ಲಿ ಮುಂದಿನ ರಾಜಕೀಯ ಕ್ರಮದ ಕುರಿತು ತೀರ್ಮಾನ ಕೈಗೊಳ್ಳುವೆ. ಕೆಲವು ಬೆಂಬಲಿಗರು ಮತ್ತೆ ಕಾಂಗ್ರೆಸ್ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು. ಬಿಜೆಪಿಗೆ ಸೇರ್ಪಡೆಯಾದ ಬಂಗಾರಪ್ಪನವರ ಕ್ರಮ ಒಂದು ತಪ್ಪು ನಿರ್ಧಾರ ಎಂದು ಅವರು ಬಣ್ಣಿಸಿದರು.
ಕುಟುಂಬ ಕಲಹ : ಸೊರಬದಿಂದ ವಿಧಾನಸಭೆಗೆ ಆಯ್ಕೆಯಾದ ಕುಮಾರ್ ಬಂಗಾರಪ್ಪ ಸಚಿವರಾಗಿದ್ದ ಕಾಲದಲ್ಲಿ ತಮ್ಮನ್ನು ನಿರ್ಲಕ್ಷಿಸಿದರು ಎನ್ನುವ ನೋವು ಬಂಗಾರಪ್ಪನವರಲ್ಲಿದ್ದು , ಈ ನೋವನ್ನು ಇತ್ತೀಚೆಗೆ ಬಹಿರಂಗ ಸಭೆಯಲ್ಲಿ ತೋಡಿಕೊಂಡಿದ್ದರು. ತನ್ನ ಶತ್ರುಗಳ ಜೊತೆ ಸೇರಿದ ಮಗನಿಂದ ಬರಿಗೈಯಲ್ಲಿ ಮನೆಯಿಂದ ಹೊರಬರಬೇಕಾಯಿತು ಎಂದು ಬಂಗಾರಪ್ಪ ಕಣ್ಣೀರಿಟ್ಟಿದ್ದರು.
ಮಗ ಕುಮಾರ್ ಬಂಗಾರಪ್ಪನ ಮೇಲಿನ ಸಿಟ್ಟಿನಿಂದ ಸೊರಬ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಬಂಗಾರಪ್ಪ ತಮ್ಮ ಕಿರಿಯ ಪುತ್ರ ಮಧು ಬಂಗಾರಪ್ಪನವರಿಗೆ ನೀಡಿದ್ದಾರೆ. ಇದರಿಂದಾಗಿ ಬೇಸತ್ತಿರುವ ಕುಮಾರ್ ಬಂಗಾರಪ್ಪ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಕೆಲವೇ ದಿನಗಳ ಹಿಂದೆ ತಮ್ಮನ್ನು ಪಿತೃವಾಕ್ಯ ಪರಿಪಾಲಕ ಎಂದು ಬಣ್ಣಿಸಿಕೊಂಡು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಕುಮಾರ್ ಬಂಗಾರಪ್ಪ ಈಗ ರಾಗ ಬದಲಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications