‘ಕುಮಾರ್’ಗೆ ಕೊಕ್‌ನೀಡಿದ ಬಿಜೆಪಿ ಆಭ್ಯರ್ಥಿಗಳ ಪ್ರಥಮ ಪಟ್ಟಿ
‘ಕುಮಾರ್’ಗೆ ಕೊಕ್‌ನೀಡಿದ ಬಿಜೆಪಿ ಆಭ್ಯರ್ಥಿಗಳ ಪ್ರಥಮ ಪಟ್ಟಿ
ಧನಂಜಯ ಕುಮಾರ್ ಮತ್ತು ಕುಮಾರ್ ಬಂಗಾರಪ್ಪ ಟಿಕೆಟ್ ವಂಚಿತರು
ಇದರೊಂದಿಗೆ ಕರ್ನಾಟಕದ 125 ವಿಧಾನಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ವಿಧಾನಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿಸರ್ಜಿತ ವಿಧಾನಸಭೆಯ 28 ಸದಸ್ಯರು ಟಿಕೆಟ್‌ಮತ್ತೆ ಪಡೆದಿದ್ದಾರೆ. ಸೊರಬದಿಂದ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಎಂದೇ ನಂಬಲಾದ ಅನಂತ್‌ಕುಮಾರ್‌ದಕ್ಷಿಣ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಾಂಗ್ಲಿಯಾನ ಉತ್ರ ಬೆಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ನೀಡಿಕೆಯಲ್ಲಿ ಬಂಗಾರಪ್ಪ ಪ್ರಭಾವ ಬಿರುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ರಾಜ್ಯ ನಾಯಕರಾದ ಈಶ್ವರಪ್ಪ ಶಿವಮೊಗ್ಗ ದಿಂದ ಮತ್ತು ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ
| ಕ್ಷೇತ್ರ | ಅಭ್ಯರ್ಥಿ |
| ಮಂಗಳೂರು | ಡಿ.ವಿ.ಸದಾನಂದ ಗೌಡ |
| ಶಿವಮೊಗ್ಗ | ಎಸ್. ಬಂಗಾರಪ್ಪ |
| ಕೆನರಾ | ಅನಂತ್ ಕುಮಾರ್ ಹೆಗಡೆ |
| ಬೆಂಗಳೂರು ದಕ್ಷಿಣ | ಅನಂತ್ ಕುಮಾರ್ |
| ತುಮಕೂರು | ಮಲ್ಲಿಕಾರ್ಜುನಯ್ಯ |
| ಕನಕಪುರ | ರಾಮಚಂದ್ರೇ ಗೌಡ |
| ಬೆಂಗಳೂರು ಉತ್ತರ | ಎಚ್.ಟಿ. ಸಾಂಗ್ಲಿಯಾನ |
| ಚಿಕ್ಕೊಡಿ | ರಮೇಶ್ ಜಿಗಜಿಣಗಿ |
| ದಾವಣಗೆರೆ | ಜಿ.ಎಂ. ಸಿದ್ದೇಶ್ವರ |
| ಕೋಲಾರ | ಡಿ.ಎಸ್.ವೀರಯ್ಯ |
| ರಾಯಚೂರು | ಕೆ. ಸುರೇಶ್ ರೆಡ್ಡಿ |
| ಬೆಳಗಾವಿ | ಸುರೇಶ್ ಅಂಗಡಿ |
| ಬಿಜಾಪುರ | ಬಸವನಗೌಡ ಪಾಟೀಲ್ ಯತ್ನಾಳ್ |
| ಧಾರವಾಡ ಉತ್ತರ | ಪ್ರಹ್ಲಾದ್ ಜೋಷಿ |
| ಗುಲ್ಬರ್ಗ | ಬಸವರಾಜ ಪಾಟೀಲ ಸೇಡಂ |
| ಉಡುಪಿ | ಮನೋರಮಾ ಮಧ್ವರಾಜ್ |
| ಚಿಕ್ಕಮಗಳೂರು | ಡಿ.ಸಿ.ಶ್ರಿಕಂಠಪ್ಪ |
| ಬೀದರ್ | ರಾಮಚಂದ್ರ ವೀರಪ್ಪ |
| ಮೈಸೂರ್ | ಸಿ.ಎಚ್.ವಿಜಯ ಶಂಕರ್ |
| ಕೊಪ್ಪಳ | ನಾಗಪ್ಪ ಸಾಲೋಣಿ |
ಮುಖಪುಟ / ವಾರ್ತೆಗಳು












Click it and Unblock the Notifications